Ashwaveega News 24×7 ಜನವರಿ 14 – ಬೆಂಗಳೂರು – BigBoss – ಬಿಗ್ಬಾಸ್ ಶೋ ವಿರುದ್ಧ ಕಿಡಿಕಾರಿದ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಬೆಂಗಳೂರು ಘಟಕದ ಜಿಲ್ಲಾಧ್ಯಕ್ಷ ಧರ್ಮರಾಜ್ ಗೌಡ, “ಬಿಗ್ಬಾಸ್ ಅನ್ನೋದೇ ಒಂದು ಪುಟಗೋಸಿ ಶೋ” ಎಂದು ತೀವ್ರ ಟೀಕೆ ಮಾಡಿದ್ದಾರೆ.
ಅಶ್ವವೇಗ ನ್ಯೂಸ್ಗೆ ಎಕ್ಸ್ಕ್ಲೂಸೀವ್ ಪ್ರತಿಕ್ರಿಯೆ ನೀಡಿದ ಅವರು, ಕರವೇ ನಾಯಕ ನಾರಾಯಣಗೌಡ ಹಾಗೂ ನಟ ಕಿಚ್ಚ ಸುದೀಪ್ ಭೇಟಿ ಕುರಿತಂತೆ ಹರಡುತ್ತಿರುವ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿದರು. ಅಶ್ವಿನಿಗೌಡ ಪರ ನಡೆದಿದೆ ಎಂಬ ಆರೋಪಕ್ಕೆ ಕಿಡಿಕಾರಿದ ಧರ್ಮರಾಜ್ ಗೌಡ, “ಅಶ್ವಿನಿಗೌಡ ಕನ್ನಡ ಹೋರಾಟಗಾರ್ತಿ. ಕನ್ನಡಕ್ಕಾಗಿ ನಾವೆಲ್ಲ ಬೆಂಬಲಿಸಿದ್ದೇವೆ” ಎಂದರು.
ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಟೀಕೆ–ಟಿಪ್ಪಣಿಗಳ ಕುರಿತು ಮಾತನಾಡಿದ ಅವರು, “ಜಾಲತಾಣದಲ್ಲಿ ಟೀಕಿಸುವ ಪ್ರತಿಯೊಬ್ಬರಿಗೂ ನಾನು ಉತ್ತರ ಕೊಡಬೇಕಿಲ್ಲ. ಜನರು ನಮ್ಮ ಬಗ್ಗೆ ಸಾವಿರ ಮಾತುಗಳನ್ನು ಆಡುತ್ತಾರೆ. ಒಳ್ಳೆಯವರನ್ನ ಕೆಟ್ಟದಾಗಿ, ಕೆಟ್ಟವರನ್ನ ಒಳ್ಳೆಯದಾಗಿ ತೋರಿಸುತ್ತಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕರವೇ ನಾಯಕ ನಾರಾಯಣಗೌಡ ಅವರು ಕನ್ನಡಕ್ಕಾಗಿ 35 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದಾರೆ ಎಂದು ಸ್ಮರಿಸಿದ ಧರ್ಮರಾಜ್, “ಟೀಕೆ ಮಾಡುವವರು ಮೊದಲು ನಮ್ಮಂತೆಯೇ ಹೋರಾಟ ಮಾಡಿ ತೋರಿಸಲಿ” ಎಂದು ಸವಾಲು ಹಾಕಿದರು.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬಿಗ್ಬಾಸ್ ಶೋ ವಿರುದ್ಧ ಪುನಃ ಪುನಃ “ಪುಟಗೋಸಿ ಬಿಗ್ಬಾಸ್” ಎಂದು ಕಿಡಿಕಾರಿದ ಅವರು, ನೆಟ್ಟಿಗರ ಟೀಕೆಗಳಿಗೂ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.
