Ashwaveega News 24×7 ಜನವರಿ 14 – ಬೆಂಗಳೂರು – `Bigg Boss 12 finale midweek elimination shock !’ – ಬಿಗ್ ಬಾಸ್ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದ್ದು, ಮನೆಯಲ್ಲಿ ಆತಂಕ ಮನೆಮಾಡಿದೆ. ಧನುಷ್ ಹೊರತುಪಡಿಸಿ ಉಳಿದ ಆರು ಸ್ಪರ್ಧಿಗಳು ನಾಮಿನೇಟ್ ಆಗಿದ್ದು, ಈ ವಾರ ‘ಮಿಡ್ ವೀಕ್ ಎಲಿಮಿನೇಷನ್’ ನಡೆಯಲಿದೆ. ಮಂಗಳವಾರದವರೆಗೆ ಮಾತ್ರ ವೋಟಿಂಗ್ ಅವಕಾಶವಿದ್ದು, ಯಾರು ಹೊರಹೋಗುತ್ತಾರೆಂಬ ಕುತೂಹಲ ಹೆಚ್ಚಿತ್ತು . ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಇದೇ ಜನವರಿ 18ಕ್ಕೆ ಫಿನಾಲೆ ನಡೆಯಲಿದೆ. ಕೊನೆಯದಾಗಿ ಮನೆಯೊಳಗೆ ಈಗ 7 ಮಂದಿ ಮಾತ್ರ ಉಳಿದುಕೊಂಡಿದ್ದಾರೆ. ಇವರಲ್ಲಿ ಯಾರು ಫಿನಾಲೆ ವೇದಿಕೆವರೆಗೂ ಬರುತ್ತಾರೆ ? ಯಾರೆಲ್ಲಾ ಕೊನೆ ವಾರದಲ್ಲಿ ಉಳಿದುಕೊಳ್ಳುತ್ತಾರೆ ಎಂಬ ಬಗ್ಗೆ ಕುತೂಹಲ ಇತ್ತು .
ಬಿಗ್ಬಾಸ್ ಸೀಸನ್ 12ರ ಫಿನಾಲೆ ವಾರದ ಮಿಡ್ವೀಕ್ ಎಲಿಮಿನೇಷನ್ನಲ್ಲಿ ಪ್ರಬಲ ಸ್ಪರ್ಧಿ ಧ್ರುವಂತ್ ಮನೆಯಿಂದ ಹೊರಬಂದಿದ್ದಾರೆ. ತಾನೇ ವಿನ್ನರ್ ಎಂದು ಅಬ್ಬರಿಸಿದ್ದ ಧ್ರುವಂತ್, ಮಧ್ಯರಾತ್ರಿ ನಡೆದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಅನಿರೀಕ್ಷಿತವಾಗಿ ನಿರ್ಗಮಿಸಿದ್ದಾರೆ.
ಬಿಗ್ಬಾಸ್ ಸೀಸನ್ 12ರ ಕೊನೆ ವಾರದ ಮಿಡ್ವೀಕ್ ಎಲಿಮಿನೇಷನ್ನಲ್ಲಿ ಪ್ರಬಲ ಸ್ಪರ್ಧಿಯೇ ಮನೆಯಿಂದ ಹೊರ ಬಂದಿದ್ದಾರೆ. ಮಂಗಳವಾರದ ಸಂಚಿಕೆಯಲ್ಲಿ ಅಭಿಮಾನಿಗಳ ಮುಂದೆ ಅಬ್ಬರದಿಂದ ಮಾತನಾಡಿ, ನಾನೇ ವಿನ್ನರ್ ಎಂಬ ಸಂದೇಶವನ್ನು ರವಾನಿಸಿದ್ದರು.

ಮಾಹಿತಿಗಳ ಪ್ರಕಾರ, ಧ್ರುವಂತ್ ಮನೆಯಿಂದ ಹೊರ ಬಂದಿದ್ದಾರೆ. ಧನುಷ್ ಟಾಪ್ 6ಗೆ ಆಯ್ಕೆಯಾಗಿದ್ದರಿಂದ ಇನ್ನುಳಿದ ಎಲ್ಲಾ ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಮಂಗಳವಾರ ಸಂಜೆ 6 ಗಂಟೆವರೆಗೆ ಮಾತ್ರ ವೋಟಿಂಗ್ ಲೈನ್ ತೆರೆಯಲಾಗಿತ್ತು. ವೋಟಿಂಗ್ ಲೈನ್ ಕ್ಲೋಸ್ ಆಗ್ತಿದ್ದಂತೆ ಮಧ್ಯರಾತ್ರಿ ನಾಮಿನೇಷನ್ ಪ್ರಕ್ರಿಯೆ ನಡೆದಿದೆ.
