Ashwaveega News 24×7 ಜನವರಿ 19 – ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಬಿಗ್ಬಾಸ್ ವಿಜೇತ ಗಿಲ್ಲಿಗೆ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ದೊರೆಯಿತು. ಮದ್ದೂರಿನಿಂದ ಮಳವಳ್ಳಿಯವರೆಗೆ ನಡೆದ ರೋಡ್ ಶೋ ವೇಳೆ ಸಾವಿರಾರು ಅಭಿಮಾನಿಗಳು ಪಾಲ್ಗೊಂಡು ಗಿಲ್ಲಿಗೆ ಹಾರೈಸಿದರು.
ಬೃಹತ್ ಕಿತ್ತಳೆ ಹಣ್ಣಿನ ಹಾರವನ್ನು ಹಾಕಿ ಗಿಲ್ಲಿಗೆ ಅದ್ಧೂರಿಯಾಗಿ ವೆಲ್ಕಮ್ ಮಾಡಲಾಯಿತು. ತವರಿನ ಅಭಿಮಾನಿಗಳ ಅಪಾರ ಪ್ರೀತಿಯಿಂದ ಗಿಲ್ಲಿ ಭಾವುಕರಾದರು. “ಗಿಲ್ಲಿ… ಗಿಲ್ಲಿ…” ಎಂಬ ಜಯಘೋಷಗಳು ಇಡೀ ಪ್ರದೇಶವನ್ನು ಆವರಿಸಿದವು.
ಮದ್ದೂರಿನಿಂದ ಮಳವಳ್ಳಿಯತ್ತ ಸಾಗಿದ ರೋಡ್ ಶೋ ವೇಳೆ ಹಳ್ಳಿ ಹಳ್ಳಿಗಳಲ್ಲೂ ಗಿಲ್ಲಿಗೆ ಭರ್ಜರಿ ಸ್ವಾಗತ ದೊರೆಯಿತು. ಮಂಡ್ಯದ ಮನ ಗೆದ್ದ ಮಳವಳ್ಳಿಯ ಹೈದ ಗಿಲ್ಲಿಗೆ ಅಭಿಮಾನಿಗಳ ಪ್ರೀತಿ ಅಭೂತಪೂರ್ವವಾಗಿತ್ತು.
