Ashwaveega News 24×7 ಜನವರಿ 11 – Bigg Boss Kannada 12 – ಕಿಚ್ಚನ ಚಪ್ಪಾಳೆ (Kichchan Chappale) ಯಾರಿಗೆ ಸಿಕ್ಕಿದೆ. ಕಟ್ಟ ಕಡೆಯ ಈ ಚಪ್ಪಾಳೆಗೆ ಯಾರು ಅರ್ಹರು. ಮನೆಯಲ್ಲಿ ಈ ವಾರ ಅಷ್ಟು ಅದ್ಭುತವಾಗಿ ಯಾರು ಆಡಿದ್ದಾರೆ. ಈ ಪ್ರಶ್ನೆಗೆ ಒಂದಲ್ಲ, ಎರಡು ಹೆಸರು ಇವೆ. ಮನೆಯ 8 ಜನರಲ್ಲಿ 6 ಜನ ಒಂದು ಕಡೆ ಇದ್ದಾರೆ. ಇನ್ನು ಇಬ್ಬರು ಒಂದು ಕಡೆ ಇದ್ದಾರೆ. ಇವರ ಛಲ, ಇವರ ಫೋಕಸ್, ಇವರ ಆಟದ ಪರಿ, ಎಲ್ಲವೂ ಗಮನದಲ್ಲಿಟ್ಟುಕೊಂಡು ಮತ್ತು ಕಿಚ್ಚನ ಹೃದಯ ಕದ್ದವರು ಯಾರು ಅನ್ನೋದು ಇಲ್ಲಿದೆ ಓದಿ.
ದೊಡ್ಮನೆಯಲ್ಲಿ ಈ ಸಲ ನಿರೀಕ್ಷೆ ಮಾಡೋಕೆ ಆಗೋದೇ ಇಲ್ಲ. ಆ ರೀತಿಯ ಬದಲಾವಣೆಗಳು ಆಗಿವೆ. ಆ ರೀತಿನೇ ಈ ಸಲ ಮನೆಯಲ್ಲಿ ಕಿಚ್ಚನ ಚಪ್ಪಾಳೆ ಸಿಕ್ಕಿದೆ. ಒಬ್ಬರಿಗೆ ಕಿಚ್ಚನ ಚಪ್ಪಾಳೆ ಸಿಗೋದೇ ಕಷ್ಟ. ಅಷ್ಟು ಸುಲಭಕ್ಕೆ ಸುದೀಪ್ ತಮ್ಮ ಚಪ್ಪಾಳೆಯನ್ನ ಕೊಡೋದಿಲ್ಲ.
ಕಿಚ್ಚ ಸುದೀಪ್ ಈಗಾಗಲೇ ಹೇಳಿದಂತೆ ಇವರ ಆಟವನ್ನ ಗಮನಿಸಿದ್ದಾರೆ. ಇವರ ಡೆಡಿಕೇಷನ್, ಇವರ ಫೋಕಸ್, ಇವರ ಹಠ, ಇವರ ಛಲ ಎಲ್ಲವನ್ನೂ ಸುದೀಪ್ ನೋಡಿದ್ದಾರೆ. ನೋಡಿದ್ಮೇಲೆ ಸುಮ್ನೆ ಇಲ್ವೇ ಇಲ್ಲ. ಬದಲಾಗಿ ತಮ್ಮ ಚಪ್ಪಾಳೆಯನ್ನ ಕೊಟ್ಟಿದ್ದಾರೆ.
‘ಸೀಸನ್ ಚಪ್ಪಾಳೆ’ಗೆ ಸಂಬಂಧಿಸಿದಂತೆ ಕಿಚ್ಚ ಸುದೀಪ್ ಅವರ ನಿರ್ಧಾರಕ್ಕೆ ಆಕ್ರೋಶ ವ್ಯಕ್ತವಾಗಿದ್ದು, ಬಿಗ್ಬಾಸ್ ಕನ್ನಡ ಸೀಸನ್ 12ರಲ್ಲಿ ಅಶ್ವಿನಿ ಗೌಡ ಮತ್ತು ಧ್ರುವಂತ್ಗೆ ಚಪ್ಪಾಳೆ ನೀಡಿದ್ದಕ್ಕೆ ವೀಕ್ಷಕರು ಅಸಮಾಧಾನಗೊಂಡಿದ್ದಾರೆ, ವಿಶೇಷವಾಗಿ ಧ್ರುವಂತ್ಗೆ ಸಿಕ್ಕಿದ್ದಕ್ಕೆ ಕೆಲವರು ವಿರೋಧಿಸಿದ್ದಾರೆ. ಈ ಚಪ್ಪಾಳೆ ವಿವಾದವು ಸೀಸನ್ನ ಅಂತಿಮ ಹಂತದಲ್ಲಿ ತೀವ್ರಗೊಂಡಿದ್ದು, ಧ್ರುವಂತ್ರ ಆಟದ ಬಗ್ಗೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ.
ಸಂಕ್ಷಿಪ್ತವಾಗಿ, ಈ ಸೀಸನ್ನ ಚಪ್ಪಾಳೆ ವಿವಾದವು ಧ್ರುವಂತ್ರ ಪ್ರದರ್ಶನ ಮತ್ತು ಕಿಚ್ಚನ ಆಯ್ಕೆಯ ಬಗ್ಗೆ ವೀಕ್ಷಕರಲ್ಲಿ ಭಿನ್ನಾಭಿಪ್ರಾಯಗಳನ್ನು ಮೂಡಿಸಿದೆ …
