Ashwaveega News 24×7 ಜನವರಿ 23 – ಬೆಂಗಳೂರು : ಬಿಗ್ಬಾಸ್ ಮೂಲಕ ಮನೆಮಾತಾದ “ಪಳಾರ್” ಗಿಲ್ಲಿಗೆ ಈಗ ಅದೃಷ್ಟದ ಬಾಗಿಲು ಒಂದರ ಹಿಂದೆ ಒಂದರಂತೆ ತೆರೆದುಕೊಳ್ಳುತ್ತಿದ್ದು, ಕನ್ನಡಿಗರ ನೆಚ್ಚಿನ ಮುಖವಾಗಿ ಗಿಲ್ಲಿ ಹೊರಹೊಮ್ಮಿದ್ದಾರೆ. ಬಿಗ್ಬಾಸ್ ವಿಜೇತರಾದ ಬಳಿಕ ಗಿಲ್ಲಿಯ ಜೀವನವೇ ಬದಲಾಗಿದ್ದು, ಇದೀಗ ರಾಜ್ಯದ ಹೆಮ್ಮೆಯ ಉದ್ಯಮವಾದ ಕೆಎಂಎಫ್ (KMF) ಜತೆಗೂ ಹೆಸರು ಕೇಳಿಬರುತ್ತಿದೆ.
ಕನ್ನಡಿಗರ ಬ್ರ್ಯಾಂಡ್ ಆಗಿರುವ ನಂದಿನಿ ಹಾಲು, ತುಪ್ಪ ಸೇರಿದಂತೆ ಕೆಎಂಎಫ್ ಉತ್ಪನ್ನಗಳ ಜಾಹೀರಾತುಗಳಿಗೆ ಗಿಲ್ಲಿಯನ್ನು “ಬ್ರ್ಯಾಂಡ್ ಅಂಬಾಸಿಡರ್” ಆಗಿ ನೇಮಕ ಮಾಡುವ ಚರ್ಚೆಗಳು ಜೋರಾಗಿವೆ. ಈ ಕುರಿತು ಮಾತನಾಡಿದ ಮಳವಳ್ಳಿ ಶಿವಣ್ಣ, “ಶಿವರಾಜ್ಕುಮಾರ್ ಅವರು ಮಾಡಿದ ರೀತಿಯಲ್ಲೇ ಗಿಲ್ಲಿಯಿಂದ ನಂದಿನಿ ಹಾಲು ಹಾಗೂ ತುಪ್ಪದ ಪ್ರಚಾರ ಮಾಡಿಸಬಹುದು. ಕೆಎಂಎಫ್ನವರು ದುಡ್ಡು ಕೊಡ್ತಾರೆ, ಡೋಂಟ್ ವರಿ” ಎಂದು ಭರವಸೆ ನೀಡಿದ್ದಾರೆ.
ಇದೇ ವೇಳೆ, “ಬ್ರ್ಯಾಂಡ್ ಅಂಬಾಸಿಡರ್ ವಿಷಯವಾಗಿ ಸಿಎಂ ಜತೆ ಮಾತನಾಡುತ್ತೇನೆ. ಎಲ್ಲ ಕಡೆ ನಿನ್ನದೇ ಹವಾ ಇದೆ. ಒಳ್ಳೆಯದೇ ಆಗಲಿ” ಎಂದು ಗಿಲ್ಲಿಗೆ ಹುರಿದುಂಬಿಸಿದ್ದಾರೆ. ಬಿಗ್ಬಾಸ್ ನಂತರ ಗಿಲ್ಲಿಗೆ ದೊರಕುತ್ತಿರುವ ಬೆಂಬಲ ಮತ್ತು ಅವಕಾಶಗಳು ಅವರ ಭವಿಷ್ಯಕ್ಕೆ ಹೊಸ ದಾರಿ ತೆರೆದಂತಾಗಿದೆ.
ಇತ್ತೀಚೆಗೆ ಮಳವಳ್ಳಿ ಶಿವಣ್ಣ ಅವರು ಬಿಗ್ಬಾಸ್ ಗಿಲ್ಲಿ ನಟನನ್ನು ಸನ್ಮಾನಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಅವಕಾಶಗಳು ದೊರಕುವ ಸೂಚನೆ ನೀಡಿದ್ದಾರೆ. ಕನ್ನಡಿಗರ ಬ್ರ್ಯಾಂಡ್ಗೆ ಕನ್ನಡಿಗನೇ ಪ್ರತಿನಿಧಿಯಾಗಬೇಕು ಎಂಬ ಧ್ವನಿ ಜೋರಾಗುತ್ತಿರುವ ನಡುವೆ, ಗಿಲ್ಲಿ ಕೆಎಂಎಫ್ ಬ್ರ್ಯಾಂಡ್ ಅಂಬಾಸಿಡರ್ ಆಗುವ ಸಾಧ್ಯತೆ ಕುತೂಹಲ ಮೂಡಿಸಿದೆ.
