Ashwaveega News 24×7 ಮಾರ್ಚ್ 11 – 2026 : ಬೆಂಗಳೂರಿನ ಕೋರಮಂಗಲದಲ್ಲಿ ಡೆಲಿವರಿ ಬಾಯ್ ಮತ್ತು ಗ್ರಾಹಕರ ನಡುವಿನ ವಾಗ್ವಾದ ಹಲ್ಲೆಗೆ ತಿರುಗಿದ ಘಟನೆ ನಡೆದಿದೆ. ಈ ಘಟನೆಯಲ್ಲಿ ಗ್ರಾಹಕನ ಮೂಗು ಮುರಿದಿರುವುದು ತಿಳಿದುಬಂದಿದೆ.
ಕೋರಮಂಗಲದ 8ನೇ ಬ್ಲಾಕ್ನಲ್ಲಿ ಈ ಘಟನೆ ನಡೆದಿದೆ. ಪೌಲ್ ಎಂಬ ಗ್ರಾಹಕ ಬ್ಲಿಂಕಿಟ್ ಆ್ಯಪ್ ಮೂಲಕ ಸ್ನ್ಯಾಕ್ಸ್ ಆರ್ಡರ್ ಮಾಡಿದ್ದರು. ಪೌಲ್ ಮನೆ ಬಿಲ್ಡಿಂಗ್ನ ಎರಡನೇ ಮಹಡಿಯಲ್ಲಿ ಇದ್ದರೂ, ಡೆಲಿವರಿ ಬಾಯ್ ಜೋಸೆಫ್ ನಾಲ್ಕನೇ ಮಹಡಿಗೆ ತೆರಳುತ್ತಿದ್ದನೆಂದು ತಿಳಿದುಬಂದಿದೆ.
ಈ ವೇಳೆ ಪೌಲ್ ಕರೆ ಮಾಡಿ ಎರಡನೇ ಮಹಡಿಗೆ ಬರಲು ಸೂಚಿಸಿದ್ದಾರೆ. ಇದರಿಂದ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ವಾಗ್ವಾದ ಆರಂಭವಾಗಿದೆ .
ವಿವಾದ ತೀವ್ರಗೊಂಡ ಬಳಿಕ ಕೋಪಗೊಂಡ ಡೆಲಿವರಿ ಬಾಯ್ ಜೋಸೆಫ್, ಪೌಲ್ ಮುಖಕ್ಕೆ ಪಂಚ್ ಹೊಡೆದಿದ್ದಾನೆ. ಪರಿಣಾಮ ಪೌಲ್ ಅವರ ಮೂಗು ಮುರಿದಿದ್ದು, ಚಿಕಿತ್ಸೆಗಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಅವರು ಕೇರಳಕ್ಕೆ ತೆರಳಿದ್ದಾರೆ .
ಈ ಘಟನೆ ಸಂಬಂಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಡೆಲಿವರಿ ಬಾಯ್ ಜೋಸೆಫ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ .
