ಬೆಂಗಳೂರು : ನಗರದ ಮೈಸೂರು ರಸ್ತೆಯ ಹಳೆಗುಡ್ಡದಹಳ್ಳಿ ಬಳಿ ಸಿನಿಮೀಯ ರೀತಿಯಲ್ಲಿ ಬಸ್ಸನ್ನು ಹಿಂಬಾಲಿಸಿಕೊಂಡು ಹೋಗಿದ್ದು, ಬಿಎಂಟಿಸಿ ಬಸ್ ಚಾಲಕನ ಮೇಲೆ ಬೈಕ್ ಸವಾರ ಹಲ್ಲೆ ಮಾಡಿದ್ದಾನೆ.
ಇನ್ನೂ ಈ ಘಟನೆ ಮೈಸೂರು ರಸ್ತೆಯ ಹಳೆಗುಡ್ಡದಹಳ್ಳಿ ಬಳಿ ಜರುಗಿದ್ದು, 36 ವರ್ಷದ ಕಮಲ್ ಸಿಂಗ್ ಬಂಧಿತ ಆರೋಪಿ ಆಗಿದ್ದಾನೆ. ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ದೀಪಾಂಜಲಿನಗರದ ಡಿಪೋ ನಂ.16ಕ್ಕೆ ಸೇರಿದ ಕೆಎ-47ಎಫ್4034 ಬಸ್ಸು 60ಅ/8 ವಿಜಯನಗರದಿಂದ ಜಯನಗರ ಸಂಚಾರ ಮಾಡುತ್ತಿದ್ದ ವೇಳೆ ಬಸ್ಸಿನ ಚಾಲಕ ಮುರ್ತುಜಾ ಸಾಬ್ ಎಂಬವರ ಮೇಲೆ ಹಲ್ಲೆ ಮಾಡಿದ್ದಾನೆ
ಮಲ್ಲೇಶ್ವರಂನಲ್ಲಿ ಬೈಕ್ಗೆ ಬಿಎಂಟಿಸಿ ಬಸ್ ತಾಗಿದೆ. ಇದರಿಂದ ರೊಚ್ಚಿಗೆದ್ದ ಸವಾರ ಚಾಲಕನ ಜೊತೆ ಕಿರಿಕ್ ಮಾಡಿಕೊಂಡಿದ್ದಾನೆ. ಬಳಿಕ ಅಲ್ಲಿಂದ 8 ಕಿ.ಮೀ ಹಿಂಬಾಲಿಸಿಕೊಂಡು ಬಂದು ಗುಡ್ದದಹಳ್ಳಿಯ ಸಿಗ್ನಲ್ನಲ್ಲಿ ಬಸ್ ನಿಲ್ಲುತ್ತಿದ್ದಂತೆ ಚಾಲಕನ ಮೇಲೆ ಹಲ್ಲೆ ಮಾಡಿದ್ದಾನೆ. ಸದ್ಯ ಚಾಲಕ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.