Ashwaveega News 24×7 ಮಾರ್ಚ್ 10 – 2026 : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್ ಯುದ್ಧ ಮತ್ತು ಜಾಗತಿಕ ಇಂಧನ ಮಾರ್ಗವಾಗಿರುವ ಹೊರ್ಮಜ್ ಜಲಸಂಧಿ ಸ್ಥಗಿತದಿಂದ ಭಾರತದಲ್ಲಿLPG ಅಡುಗೆ ಗ್ಯಾಸ್ ಕೊರತೆ ಉಂಟಾಗಿದೆ . ಮಹಾರಾಷ್ಟ್ರ, ತಮಿಳುನಾಡು ಮತ್ತು ಕರ್ನಾಟಕದ ಹೋಟೆಲ್ ಮತ್ತು ರೆಸ್ಟೋರೆಂಟ್ ಉದ್ಯಮಗಳು ಮೇಲೆ ತೀವ್ರವಾಗಿ ಪ್ರಭಾವ ಬೀರುತ್ತಿದೆ .
ಇರಾನ್ನಿಂದ ಸುಮಾರು 3,000 ಕಿಮೀದೂರ ಯುದ್ಧ ನಡೆಯುತ್ತಿರುವ ಪರಿಣಾಮ, ಭಾರತದ ಅಡುಗೆ ಮನೆಗಳು ಮತ್ತು ವಾಣಿಜ್ಯ LPG ಸಿಲಿಂಡರ್ ಬಳಕೆ ಮಾಡುವ ಹೋಟೆಲ್ಗಳಿಗೆ ಹಾಗೂ ರೆಸ್ಟೋರೆಂಟ್ಗಳ ಮೇಲೆ ಪ್ರಭಾವ ಬೀರುತ್ತಿದೆ.. ಈ ಸಂಕಷ್ಟವು ಬೆಂಗಳೂರು, ಚೆನ್ನೈ, ಮುಂಬೈ ಮತ್ತು ಲಕ್ನೌ ಸೇರಿದಂತೆ ವಿವಿಧ ನಗರಗಳ ಹೋಟೆಲ್ಗಳಿಗೆ ತೀವ್ರವಾಗಿ ತಟ್ಟಿದೆ.

ಭಾರತದಲ್ಲಿ ಎಲ್ಪಿಜಿಯ ಅಗತ್ಯದ 60% ಕ್ಕೂಹೆಚ್ಚು ಆಮದು ಮಾಡಲಾಗುತ್ತದೆ ಮತ್ತು ಆಮದು ಆಗುವ 85–90% ಮಾರ್ಗಹಾರ್ಮುಜ್ನೇಕ್ಮೂಲಕ ಸಾಗುತ್ತದೆ . ವರ್ಷಕ್ಕೆ ಸುಮಾರು 31 ಮಿಲಿಯನ್ಟನ್ ಎಲ್ಪಿಜಿ ಬಳಕೆಯಾಗುತ್ತದೆ. ಇದರಲ್ಲಿ 87% ಮನೆಮಾಲಿಕರಿಗೆ, ಉಳಿದ 13% ಹೋಟೆಲ್ ಮತ್ತು ರೆಸ್ಟೋರೆಂಟ್ಗಳಿಗೆ.
ಹೋಟೆಲ್ಗಳು ದಿನನಿತ್ಯದ ಅಡುಗೆ ಕಾರ್ಯಾಚರಣೆಗೆ ವಾಣಿಜ್ಯ ಎಲ್ಪಿಜಿಗೆ ಅವಲಂಬಿತವಾಗಿವೆ, ಹೆಚ್ಚಿನ ರೆಸ್ಟೋರೆಂಟ್ಗಳಿಗೆ PNG ಸಂಪರ್ಕ ಅಥವಾ ದೊಡ್ಡ ಪ್ರಮಾಣದ ಎಲೆಕ್ಟ್ರಿಕ್ ಕುಕಿಂಗ್ ವ್ಯವಸ್ಥೆ ಇಲ್ಲ.
ಇದರಿಂದ ಮೆಟ್ರೋ ನಗರಗಳ ಜೊತೆಗೆ ಪುಣೆ ಹೋಟೆಲ್ಗಳ ಕಾರ್ಯಾಚರಣೆ ಮೇಲೆ ಪರಿಣಾಮ ಬಿದ್ದಿದೆ. ಇದರಿಂದ ನಿಮ್ಮ ಇಷ್ಟವಾಗುವ ಪುಣೆಯ ವಡಾಪಾವ್ ಬೆಂಗಳೂರಿನ ಮಸಾಲ ದೋಸೆ ಬೆಲೆ ಏರಿಕೆ ಆಗಬಹುದು ಅಥವಾ ಸ್ಪಲ್ಪ ಕಾಲಿಕವಾಗಿ ಮೆನುಗಳಲ್ಲಿ ಕಾಣೆಯಾಗುವ ಭಯ ಉಂಟಾಗಿದೆ.

ಮುಂಬೈ ಹೋಟೆಲ್ಗಳ ಸಂಘ AHAR ತಿಳಿಸಿದಂತೆ ಈಗಾಗಲೇ 20% ಹೋಟೆಲ್ಗಳುಬಂದ್ ಆಗಿವೆ. ಮುಂದಿನ ಎರಡು ದಿನಗಳಲ್ಲಿ ಪೂರೈಕೆ ಸುಧಾರಣೆ ಇಲ್ಲದಿದ್ದರೆ 50% ಹೋಟೆಲ್ಗಳು ಬಂದ್ ಆಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ. ದಾದರ್ ಮತ್ತು ಅಂಧೇರಿ ಪ್ರದೇಶದ ಹೋಟೆಲ್ಗಳಲ್ಲಿ ಮೆನುಗಳನ್ನು ಚಿಕ್ಕದಾಗಿ ಮಾಡಲಾಗಿದೆ, ಸರ್ಕಾರ ಮನೆಮಾಲಿಕರಿಗೆ ಪ್ರಾಧಾನ್ಯತೆಯಿಂದ LPG ಪೂರೈಕೆ ಮಾಡುತ್ತಿದ್ದುದರಿಂದ ವಾಣಿಜ್ಯ ಸಿಲಿಂಡರ್ಗಳ ಪೂರೈಕೆ Sunday ರಿಂದ ಬಹುಮಟ್ಟಿಗೆ ಸ್ಥಗಿತವಾಗಿದೆ.
ಇನ್ನೂ ಕರ್ನಾಟಕದ ಐಟಿ ನಗರ Bengaluru ನಲ್ಲಿ ಹೋಟೆಲ್ಗಳ ಸಂಘವು ತಿಳಿಸಿದ್ದಂತೆ ಮಾರ್ಚ್ 10 ರಿಂದ ನಗರದ ಹೋಟೆಲ್ ಕಾರ್ಯಾಚರಣೆ ಮೇಲೆ ಪರಿಣಾಮ ಬೀರಬಹುದು. ವಿಶೇಷವಾಗಿ ಬೆಂಗಳೂರು ಐಕಾನಿಕ್ ಬ್ರೇಕ್ಫಾಸ್ಟ್ ಜಾಯಿಂಟ್ ವಿದ್ಯಾರ್ಥಿಭವನ ಈಗ ಬಂದ್ ಆಗುವ ಸಾಧ್ಯತೆಯನ್ನು ಎದುರಿಸುತ್ತಿದೆ.

“ಇದೀಗ ನನಗೆ ಐದು ಸಿಲಿಂಡರ್ಗಳು ಮಾತ್ರ ಉಳಿದಿವೆ , ನಾಳೆಯ ಮಧ್ಯಾಹ್ನದವರೆಗೆ ಮಾತ್ರ ನಡೆಸಬಹುದು . ಬಳಿಕ ಗ್ಯಾಸ್ ಇಲ್ಲದಿದ್ದರೆ ಬಂದ್ ಮಾಡಬೇಕಾಗುತ್ತದೆ. ಎರಡು ತವಗಳನ್ನು ತಕ್ಷಣ ನಿಲ್ಲಿಸಿದ್ದೇನೆ” ಎಂದು ವಿದ್ಯಾರ್ಥಿ ಭವನದ ಮಾಲೀಕರು ಹೇಳಿದ್ದಾರೆ.

ಈ ಸಂಕಷ್ಟವು ಮುಂಬೈ – ಬೆಂಗಳೂರು ಹೋಟೆಲ್ ಉದ್ಯಮದ ಮೇಲೆ ತೀವ್ರ ಒತ್ತಡವನ್ನು ಉಂಟುಮಾಡುತ್ತಿದೆ, ಮತ್ತು ಎಲ್ಪಿಜಿ ಪೂರೈಕೆ ಮುಂದುವರೆದಿಲ್ಲದಿದ್ದರೆ, ಮೆನುಗಳಲ್ಲಿ ಆಹಾರ ವಸ್ತುಗಳ ಬೆಲೆ ಮೇಲೆ ಪರಿಣಾಮ ಬೀರಲಿದೆ.
