Ashwaveega News 24×7 ಜನವರಿ 18 – ಒಂದು ಕಾಲದಲ್ಲಿ ವಿದೇಶಿ ಹಣ್ಣು ಎಂದೇ ಕರೆಸಿಕೊಂಡಿದ್ದ ಬಟರ್ ಫ್ರೂಟ್ (Avocado) ಇಂದು ಭಾರತೀಯ ರೈತರ ಪಾಲಿಗೆ ಕೋಟಿ ಕನಸು ಸಾಕಾರ ಮಾಡುವ ಬೆಳೆಯಾಗಿ ಪರಿಣಮಿಸಿದೆ. ಕಡಿಮೆ ಜಮೀನು, ಸರಿಯಾದ ತಂತ್ರಜ್ಞಾನ ಮತ್ತು ಮಾರುಕಟ್ಟೆ ಜ್ಞಾನ ಇದ್ದರೆ ಬಟರ್ ಫ್ರೂಟ್ ಬೆಳೆಯಲ್ಲಿ ಲಕ್ಷಗಳಿಂದ ಕೋಟಿವರೆಗಿನ ಆದಾಯ ಸಾಧ್ಯ ಎಂಬುದು ಕೃಷಿ ತಜ್ಞರ ಅಭಿಪ್ರಾಯ.
ಬಟರ್ ಫ್ರೂಟ್ ಬೆಳೆಗೆ ಮಧ್ಯಮ ತಾಪಮಾನ, ಉತ್ತಮ ನೀರು ಹೊರಹೋಗುವ ವ್ಯವಸ್ಥೆಯಿರುವ ಕೆಂಪು ಅಥವಾ ಲೋಮಿ ಮಣ್ಣು ಅತ್ಯುತ್ತಮ. ಕರ್ನಾಟಕದ ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ, ತಮಿಳುನಾಡು ಮತ್ತು ಮಹಾರಾಷ್ಟ್ರದ ಕೆಲ ಭಾಗಗಳಲ್ಲಿ ಈ ಬೆಳೆಗೆ ಉತ್ತಮ ವಾತಾವರಣವಿದೆ.
ಒಂದು ಎಕರೆ ಜಮೀನಿನಲ್ಲಿ ಸರಾಸರಿ 100 ರಿಂದ 120 ಗಿಡಗಳನ್ನು ನೆಡಬಹುದು. ಗಿಡ ನೆಟ್ಟ 3ರಿಂದ 4ನೇ ವರ್ಷಕ್ಕೆ ಫಲಧಾರಣೆ ಪ್ರಾರಂಭವಾಗುತ್ತದೆ. ಪೂರ್ಣ ಬೆಳವಣಿಗೆಯ ನಂತರ ಪ್ರತಿ ಗಿಡದಿಂದ 80 –150 ಕೆಜಿ ಫಲ ದೊರೆಯುತ್ತದೆ.
ಮಾರುಕಟ್ಟೆಯಲ್ಲಿ ಒಂದು ಕೆಜಿ ಬಟರ್ ಫ್ರೂಟ್ಗೆ ₹200 ರಿಂದ ₹400 ವರೆಗೆ ದರ ಸಿಗುತ್ತಿದೆ.
ಒಂದು ಎಕರೆ ಜಮೀನಿನಿಂದ ವಾರ್ಷಿಕ ₹15 ಲಕ್ಷದಿಂದ ₹30 ಲಕ್ಷ ಆದಾಯ ಸಾಧ್ಯ.
ದೊಡ್ಡ ಮಟ್ಟದಲ್ಲಿ ಬೆಳೆಯಾದರೆ ಕೋಟಿ ಲಾಭವೂ ಅಸಾಧ್ಯವಲ್ಲ.
ಬಟರ್ ಫ್ರೂಟ್ ಬೆಳೆಗೆ ಇತರ ತೋಟಗಾರಿಕೆ ಬೆಳೆಗಳಂತೆ ಹೆಚ್ಚು ರಾಸಾಯನಿಕ ಗೊಬ್ಬರ ಅವಶ್ಯಕತೆ ಇಲ್ಲ. ಸಸ್ಯ ಗೊಬ್ಬರ, ಡ್ರಿಪ್ ನೀರಾವರಿ ಬಳಕೆ ಮಾಡಿದರೆ ವೆಚ್ಚ ಕಡಿಮೆಯಾಗುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚು ಇರುವುದರಿಂದ ನಷ್ಟದ ಭೀತಿ ಕಡಿಮೆ.
ಆರೋಗ್ಯ ಜಾಗೃತಿ ಹೆಚ್ಚುತ್ತಿರುವ ಹಿನ್ನೆಲೆ ಹೋಟೆಲ್, ಸೂಪರ್ ಮಾರ್ಕೆಟ್, ಜಿಮ್, ಹೆಲ್ತ್ ಡೈಟ್ ಸೆಂಟರ್ಗಳಲ್ಲಿ ಬಟರ್ ಫ್ರೂಟ್ಗೆ ಭಾರೀ ಬೇಡಿಕೆ ಇದೆ. ವಿದೇಶಕ್ಕೆ ರಫ್ತು ಮಾಡುವ ಅವಕಾಶವೂ ಹೆಚ್ಚಾಗಿದೆ.
ಕೃಷಿ ತಜ್ಞರ ಸಲಹೆ ಮೇರೆಗೆ “ಬಟರ್ ಫ್ರೂಟ್ ಭವಿಷ್ಯದ ಚಿನ್ನದ ಬೆಳೆ. ಸರಿಯಾದ ಮಾರ್ಗದರ್ಶನ, ಉತ್ತಮ ಸಸಿ ಮತ್ತು ಮಾರುಕಟ್ಟೆ ಸಂಪರ್ಕ ಇದ್ದರೆ ರೈತರು ಆರ್ಥಿಕವಾಗಿ ಬಲಿಷ್ಠರಾಗಬಹುದು” ಅಂತೆ …
