Ashwaveega News 24×7 ಏಪ್ರಿಲ್ 8 – 2026 : ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ಜನರಿಗೆ ಬಿಗ್ ರಿಲೀಫ್ ಸಿಕ್ಕಿದೆ. ನೀರಿನ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಗೆ ಬೆಂಗಳೂರು ಜಲಮಂಡಳಿ ಭರ್ಜರಿ ಸೌಲಭ್ಯ ಘೋಷಿಸಿದೆ .
ಬೆಂಗಳೂರು ಜಲ ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ನಗರ ನಿವಾಸಿಗಳಿಗೆ ಮೂರು ತಿಂಗಳ ಅವಧಿಗೆ ಒನ್ ಟೈಮ್ ಸೆಟಲ್ಮೆಂಟ್ (OTS) ಯೋಜನೆಯನ್ನು ಜಾರಿಗೆ ತಂದಿದೆ. ಏಪ್ರಿಲ್ನಿಂದ ಜೂನ್ವರೆಗೆ ಈ ವಿಶೇಷ ಸೌಲಭ್ಯ ಲಭ್ಯವಿರಲಿದೆ .
ಪ್ರಸ್ತುತ ನೀರಿನ ಬಿಲ್ಗಳ ಜೊತೆ OTS ನೋಟಿಸ್ ಕೂಡ ನೀಡಲಾಗುತ್ತಿದ್ದು, ಬಾಕಿ ಉಳಿಸಿಕೊಂಡಿರುವ ಗ್ರಾಹಕರು ಈ ಅವಕಾಶವನ್ನು ಬಳಸಿಕೊಳ್ಳಲು ಮನವಿ ಮಾಡಲಾಗಿದೆ .
ಪ್ರಸ್ತುತ BWSSBಗೆ ಸುಮಾರು 5.11 ಲಕ್ಷ ಗ್ರಾಹಕರಿಂದ ಬಿಲ್ ಬಾಕಿ ಉಳಿದಿದ್ದು, ಒಟ್ಟು 851.33 ಕೋಟಿ ರೂಪಾಯಿ ಹಣ ಬಾಕಿಯಾಗಿದೆ. ಈ ಹಿನ್ನೆಲೆಯಲ್ಲಿ ಬಾಕಿ ವಸೂಲಾತಿಗೆ ಜಲಮಂಡಳಿ ಈ ಯೋಜನೆ ಜಾರಿಗೆ ತಂದಿದೆ .
ಜೂನ್ವರೆಗೆ ಇರುವ ಈ OTS ಸೌಲಭ್ಯವನ್ನು ಬಳಸಿಕೊಂಡು ಬಾಕಿ ಮೊತ್ತವನ್ನು ತೀರಿಸಿಕೊಳ್ಳುವಂತೆ BWSSB ಗ್ರಾಹಕರಿಗೆ ಮನವಿ ಮಾಡಿದೆ .
