
10 year old boy lost his life of heart attack
(ಅಶ್ವವೇಗ) Ashwaveega News 24×7 ಜು.09: ಇತ್ತೀಚೆಗೆ ಹೃದಯಾಘಾತ ಹೆಚ್ಚಾಗಿ ಸಂಭವಿಸುತ್ತಿದೆ. ಹಿಂದೆಲ್ಲ ತೂಕ ಹೆಚ್ಚಳದಿಂದ, ರಕ್ತದೊತ್ತಡದಿಂದ ಈ ಹೃದಯಾಘಾತ ಸಂಭವಿಸುತ್ತಿತ್ತು. ಆದರೆ ಇತ್ತೀಚೆಗೆ ಚಿಕ್ಕಮಕ್ಕಳಿಗೂ ಹಾರ್ಟ್ ಅಟ್ಯಾಕ್ ಆಗುತ್ತಿದೆ. ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇತ್ತೀಚೆಗೆ ಹಾರ್ಟ್ ಅಟ್ಯಾಕ್ ಸಮಸ್ಯೆಗಳೇ ಯುವಕರನ್ನು ಕಾಡುತ್ತಿದೆ.
ಅತ್ತ ಹಾಸನ ಮಾತ್ರವಲ್ಲದೇ ರಾಜ್ಯದೆಲ್ಲಡೆ ಹಾರ್ಟ್ ಅಟ್ಯಾಕ್ನಿಂದ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಸರ್ಕಾರ ಕೂಡಾ ಎಚ್ಚೆತ್ತುಕೊಂಡು ವಿಶೇಷ ಸಮಿತಿ ರಚಿಸಿ ತನಿಖೆ ನಡೆಸುತ್ತಿದೆ. ಇದೀಗ ಚಾಮರಾಜನಗರದಲ್ಲಿ ಆಘಾತಕಾರಿ ಹೃದಯಾಘಾತದ ಪ್ರಕರಣವೊಂದು ಬೆಳಕಿಗೆ ಬಂದಿದೆ. 4ನೇ ತರಗತಿಯ ಬಾಲಕನೊಬ್ಬ ಕಿಲ್ಲರ್ ಹಾರ್ಟ್ ಅಟ್ಯಾಕ್ನಿಂದಾಗಿ ಸಾವನ್ನಪ್ಪಿದ್ದಾನೆ.
ಚಾಮರಾಜನಗರದಲ್ಲಿ ಹೃದಯಾಘಾತಕ್ಕೆ 10 ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಪಾಠ ಕೇಳುತ್ತಿದ್ದಾಗಲೇ ವಿದ್ಯಾರ್ಥಿಗೆ ಹೃದಯಾಘಾತವಾಗಿದೆ ಎಂದು ಹೇಳಲಾಗಿದೆ. 4ನೇ ತರಗತಿ ವಿದ್ಯಾರ್ಥಿ ಮನೋಜ್ಕುಮಾರ್ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ ಎಂದು ವರದಿಯಾಗಿದೆ.
ಗುಂಡ್ಲುಪೇಟೆ ಕುರುಬಗೇರಿ ಸ.ಹಿ.ಪ್ರಾ. ಶಾಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಪಾಠ ಕೇಳುತ್ತಿದ್ದಾಗ ಕುಸಿದು ಬಿದ್ದ ವಿದ್ಯಾರ್ಥಿ, ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಗುಂಡ್ಲುಪೇಟೆ ತಾಲೂಕು ದೊಡ್ಡಹುಂಡಿ ಗ್ರಾಮದ ಲೇ.ನಾಗರಾಜು-ನಾಗರತ್ನ ದಂಪತಿ ಪುತ್ರ ಮನೋಜ್ ಕುಮಾರ್ ಹೃಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಎನ್ನಲಾಗಿದೆ.