
ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಇನ್ನೊಂದು ದಿನವೇ ಬಾಕಿ ಉಳಿದಿದೆ. ಪ್ರಶಸ್ತಿಗಾಗಿ 8 ತಂಡಗಳು ಇದಾಗಲೇ ಪಾಕಿಸ್ತಾನ ಹಾಗೂ ದುಬೈ ಸೇರಿಕೊಂಡಿವೆ. ಟೂರ್ನಿ ಆರಂಭದಿಂದಲೂ ತಕರಾರು ತೆಗೆಯುತ್ತಿರುವ ಪಾಕಿಸ್ತಾನ ಮತ್ತೆ ವಿವಾದವೊಂದನ್ನು ತನ್ನ ಮೈ ಮೇಲೆ ಹಾಕಿಕೊಂಡಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ 8 ತಂಡಗಳು ಭಾಗವಹಿಸಲಿದ್ದು ಈ ಪೈಕಿ 7 ದೇಶಗಳ ಧ್ವಜವನ್ನು ಕರಾಚಿಯ ಗಡಾಫಿ ಕ್ರೀಡಾಂಗಣದ ಮೇಲ್ಛಾವಣಿಯ ಮೇಲೆ ಹಾರಿಸಲಾಗಿದೆ. ಆದರೆ ಭಾರತದ ಧ್ವಜವನ್ನು ಮಾತ್ರ ಅಲ್ಲಿ ಹಾರಿಸಲಾಗಿಲ್ಲ. 7 ದೇಶಗಳ ಧ್ವಜ ಹಾಕಿರು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಪಾಕಿಸ್ತಾನದ ನಡೆಗೆ ಭಾರತೀಯರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಆದರೆ ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ಹೋಗದ ಕಾರಣ ಪಾಕಿಸ್ತಾನ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ ಐಸಿಸಿ ನಿಯಮಗಳ ಪ್ರಕಾರ ಟೂರ್ನಮೆಂಟ್ ಪಂದ್ಯಗಳಿಗೆ ಅತಿಥ್ಯ ವಹಿಸುವ ಎಲ್ಲಾ ಕ್ರೀಡಾಂಗಣದ ಮೇಲ್ಛಾವಣಿಯ ಮೇಲೆ ಎಲ್ಲಾ ದೇಶಗಳ ಧ್ವಜವನ್ನು ಹಾರಿಸಲಾಗುತ್ತದೆ. ಆದರೆ ಪಾಕಿಸ್ತಾನ ಈ ನಿಯಮ ಪಾಲಿಸಲಿಲ್ಲ.

ಅಭಿಷೇಕ್ ಎಸ್