Ashwaveega News 24×7 ಜನವರಿ 24 – ದಿನನಿತ್ಯ ಚಿಕನ್ ಸೇವಿಸುವವರಿಗೆ ಭಾರೀ ಶಾಕ್ ಎದುರಾಗಿದೆ. ಇತ್ತೀಚಿನ ದಿನಗಳಲ್ಲಿ ಚಿಕನ್ ಬೆಲೆ ದಿಢೀರ್ ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ನೇರ ಹೊಡೆತ ಬಿದ್ದಿದೆ. ಇದುವರೆಗೆ ಕಿಲೋಗೆ 200 ರಿಂದ 240 ರೂಪಾಯಿಗಳಷ್ಟಿದ್ದ ಚಿಕನ್ ಬೆಲೆ, ಈಗ ಏಕಾಏಕಿ 350 ರೂಪಾಯಿಗಳ ಗಡಿ ದಾಟಿದೆ.ಚಿಕನ್ ಖರೀದಿಗೆ ಮಾರುಕಟ್ಟೆಗೆ ಹೋಗುವ ಜನರು ಬೆಲೆ ಕೇಳಿ ಬೆಚ್ಚಿಬಿದ್ದಿದ್ದಾರೆ.
ಚಿಕನ್ ದರ ಏರಿಕೆಗೆ ಪ್ರಮುಖ ಕಾರಣ ಉತ್ಪಾದನೆಯಲ್ಲಿ ಉಂಟಾದ ಕುಸಿತ ಆಗಿರೋದ್ರಿಂದ ತಮಿಳುನಾಡು ಹಾಗೂ ಆಂಧ್ರ ಪ್ರದೇಶಗಳಲ್ಲಿ ಸಾಕಾಣೆದಾರರು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ಕೋಳಿ ಪೂರೈಕೆ ಮೇಲೆ ಪರಿಣಾಮ ಬಿದ್ದು, ಮಾರುಕಟ್ಟೆಯಲ್ಲಿ ಕೊರತೆ ಉಂಟಾಗಿದೆ ..
ಸಾಕಾಣೆದಾರರ ಪ್ರತಿಭಟನೆ, ಆಹಾರ ವೆಚ್ಚದ ಏರಿಕೆ ಮತ್ತು ಉತ್ಪಾದನೆ ಕಡಿಮೆಯಾದ ಹಿನ್ನೆಲೆ ರಾಜ್ಯಾದ್ಯಂತ ಚಿಕನ್ ಬೆಲೆ ಗಗನಕ್ಕೇರಿದೆ. ಮುಂದಿನ ದಿನಗಳಲ್ಲಿ ಬೆಲೆ ಇಳಿಯುತ್ತದೆಯೇ ಅಥವಾ ಇನ್ನಷ್ಟು ಏರಿಕೆಯಾಗುತ್ತದೆಯೇ ಅಂತ ಗ್ರಾಹಕರಲ್ಲಿ ಆತಂಕ ಮೂಡಿಸಿದೆ.
