ashwaveega news 24×7 ಮಾರ್ಚ್26.2026ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಪೆಟ್ರೋಲ್ ಅಭಾವದ ವದಂತಿ ಹಬ್ಬಿದ ಬೆನ್ನಲ್ಲೇ ವಿವಿಧ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ತುಂಬಿಸಿಕೊಳ್ಳಲು ಜನ ಮುಗಿಬೀಳುತ್ತಿದ್ದಾರೆ. ಬಂಕ್ಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಈ ಮಧ್ಯೆ ಚಿಕ್ಕಬಳ್ಳಾಪುರದ ನಯಾರ ಪೆಟ್ರೋಲ್ ಬಂಕ್ಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಲಾಗಿದೆ.
ಪೆಟ್ರೋಲ್ ಪ್ರತಿ ಲೀಟರ್ ಮೇಲಿನ ದರ 5 ರೂಪಾಯಿ ಹಾಗೂ ಡೀಸೆಲ್ ದರ ಪ್ರತಿ ಲೀಟರ್ಗೆ 3 ರೂ. ಹೆಚ್ಚಳ ಮಾಡಲಾಗಿದೆ. ಇದರಿಂದ 1 ಲೀಟರ್ ಪೆಟ್ರೋಲ್ ಬೆಲೆ 108.28 ರೂ.ಗಳಿಗೆ ತಲುಪಿದ್ದರೆ, ಡೀಸೆಲ್ ಬೆಲೆ 1 ಲೀಟರ್ಗೆ 94.10 ರೂ.ಗಳಿಗೆ ಮಾರಾಟ ಮಾಡಲಾಗ್ತಿದೆ.

ಬಂಕ್ಗಳಲ್ಲಿ ಕ್ಯೂ
ರಾಯಚೂರಿನಲ್ಲಿ ಪೆಟ್ರೋಲ್, ಡೀಸೆಲ್ Diesel) ತುಂಬಿಸಿಕೊಳ್ಳಲು ಜನ ಮುಗಿಬಿದ್ದಿದ್ದಾರೆ. ಸ್ಟೇಷನ್ ರಸ್ತೆ, ಬಸವೇಶ್ವರ ರಸ್ತೆಯ ಪೆಟ್ರೋಲ್ ಬಂಕ್ಗಳ ಮುಂದೆ ಬೈಕ್ ಮತ್ತು ಕಾರುಗಳು ಕ್ಯೂ ನಿಲ್ಲುತ್ತಿವೆ.
ಪೆಟ್ರೋಲ್, ಡೀಸೆಲ್ ಸಿಗುತ್ತಿದೆ. ಇಂಧನ ಅಭಾವ ಇಲ್ಲ ಅಂದ್ರೂ ಜನರಲ್ಲಿ ಜನರಲ್ಲಿ ಆತಂಕ ಮಾತ್ರ ನಿಲ್ಲುತ್ತಿಲ್ಲ. ವಾಹನಗಳನ್ನು ಫುಲ್ ಸ್ಟಾಕ್ ಮಾಡಿಸಿಕೊಂಡು ಹೋಗ್ತಿರುವುದರಿಂದ ಕೆಲ ಬಂಕ್ಗಳಲ್ಲಿ ಪೆಟ್ರೋಲ್, ಡೀಸೆಲ್ ಬೇಗ ಖಾಲಿಯಾಗ್ತಿದೆ. ಹೊಸ ಸ್ಟಾಕ್ ಬರಲು ವಿಳಂಬವಾಗ್ತಿದೆ ಹೀಗಾಗಿ ಜನರಲ್ಲಿ ಪ್ಯಾನಿಕ್ ಆಗಿದ್ದಾರೆ.
