ಕಲಬುರಗಿ : ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ಕೌಟುಂಬಿಕ ಕಲಹದಿಂದ ಬೇಸತ್ತ ತಾಯಿಯೊಬ್ಬಳು ತನ್ನ ಮೂವರು ಮಕ್ಕಳಿಗೆ ಸ್ಟೈಟ್ ಬಾಟೆಲ್ನಲ್ಲಿ ಕ್ರಿಮಿನಾಶಕ ಮಿಕ್ಸ್ ಮಾಡಿ ಮಕ್ಕಳಿಗೆ ಕುಡಿಸಿ ಬಳಿಕ ತಾನು ಕುಡಿದು ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ತಡರಾತ್ರಿ ಚಿಂಚೋಳಿ ತಾಲೂಕಿನ ಜಂಗ್ಲಿ ತಾಂಡಾದಲ್ಲಿ ನಡೆದಿದೆ.
ಕ್ಷುಲ್ಲಕ ಕಾರಣಕ್ಕೆ ಮಕ್ಕಳಾದ 4 ವರ್ಷದ ಚೈತ್ಯನ್ಯ, 3 ವರ್ಷದ ಧನುಷ್ ಮತ್ತು ಒಂದೂವರೆ ತಿಂಗಳ ಮಗುವಿಗೆ ತಾಯಿ ಗೀತಾಬಾಯಿ ಹೊಡೆಯೋದು ಮಾಡ್ತಿದ್ದಳು.ಇದನ್ನ ಪ್ರಶ್ನಿಸಿದ ಗಂಡನ ಜೊತೆ ಜಗಳವಾಡಿದ್ದಳು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.