Ashwaveega News 24×7 ಫೆಬ್ರವರಿ 03 -2026 : ರಾಜ್ಯಾದ್ಯಂತ ಸಿಗರೇಟ್ ಬೆಲೆಯಲ್ಲಿ ಏಕಾಏಕಿ ಭಾರೀ ಏರಿಕೆ ಕಂಡುಬಂದಿದ್ದು, ಧೂಮಪಾನಿಗಳಿಗೆ ಶಾಕ್ ನೀಡಿದೆ. ಇತ್ತೀಚೆಗೆ ₹18 ಇದ್ದ ಐಟಿಸಿ ಕಿಂಗ್ ಸಿಗರೇಟ್, ಈಗ ಪ್ರತಿ ಸ್ಟಿಕ್ಗೆ ₹25 ದರ ತಲುಪಿದೆ.
ಕಿಂಗ್ ಸಿಗರೇಟ್ ಪಾಕೆಟ್ ಬೆಲೆ ಕೂಡ ₹250ಕ್ಕೆ ಏರಿಕೆಯಾಗಿದೆ. ಆಶ್ಚರ್ಯದ ವಿಷಯವೆಂದರೆ, ಹಳೆ ಎಂಆರ್ಪಿ ಇದ್ದರೂ ಹೊಸ ದರದಲ್ಲೇ ಸಿಗರೇಟ್ ಮಾರಾಟ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ₹170 ಎಂಆರ್ಪಿ ಇರುವ ಪಾಕೆಟ್ಗೆ ₹230 ಕೊಟ್ಟರೂ ಸಿಗರೇಟ್ ಸಿಗುತ್ತಿಲ್ಲ ಎಂದು ಗ್ರಾಹಕರು ದೂರುತ್ತಿದ್ದಾರೆ.
ಇನ್ನು ಪ್ರೀಮಿಯಂ ಬ್ರ್ಯಾಂಡ್ಗಳಲ್ಲೂ ಭಾರೀ ಏರಿಕೆ ಕಂಡುಬಂದಿದೆ. ಗೋಲ್ಡ್ ಫ್ಲಾಕ್ ಸಿಗರೇಟ್ ಪಾಕೆಟ್ ಬೆಲೆ ₹170ರಿಂದ ₹225ಕ್ಕೆ ಜಿಗಿದಿದೆ. ವಿಲ್ಸ್ ಕ್ಲಾಸಿಕ್ ಕೂಡ ₹170ರಿಂದ ₹225ಕ್ಕೆ ಏರಿಕೆಯಾಗಿದೆ. ವಿಲ್ಸ್ ನೇವಿ ಕಟ್ ಪ್ಯಾಕ್ ಬೆಲೆ ₹95ರಿಂದ ₹120ಕ್ಕೆ ಹೆಚ್ಚಳವಾಗಿದೆ. ಸಣ್ಣ ಸಿಗರೇಟ್ಗಳ ದರದಲ್ಲೂ ಬದಲಾವಣೆ ಕಂಡುಬಂದಿದೆ. 65 ಎಂಎಂ ಫಿಲ್ಟರ್ ರಹಿತ ಸಿಗರೇಟ್ಗೆ ₹2.50 ಹೆಚ್ಚಳ, 75 ಎಂಎಂ ಸಿಗರೇಟ್ಗೆ ಪ್ರತಿ ಸ್ಟಿಕ್ಗೆ ₹5.40 ಹೆಚ್ಚಳ ಮಾಡಲಾಗಿದೆ.
ಇದಕ್ಕೆ ಜೊತೆಗೆ, ಓಪನ್ ಮಾರ್ಕೆಟ್ನಲ್ಲಿ ಕೃತಕ ಅಭಾವ ಸೃಷ್ಟಿಸಲಾಗಿದೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಕೆಲವು ವ್ಯಾಪಾರಿಗಳು ಸಿಗರೇಟ್ಗಳನ್ನು ದೊಡ್ಡ ಪ್ರಮಾಣದಲ್ಲಿ ಸ್ಟಾಕ್ ಮಾಡಿಕೊಂಡು ಬೆಲೆ ಹೆಚ್ಚಳಕ್ಕೆ ಕಾಯುತ್ತಿದ್ದಾರೆ .. ಅಧಿಕೃತ ರೇಟ್ ಕಾರ್ಡ್ ಇನ್ನೂ ಪ್ರಕಟವಾಗದಿದ್ದರೂ, ಮಾರುಕಟ್ಟೆಯಲ್ಲಿ ಈಗಾಗಲೇ ದರಗಳು ಜಿಗಿದಿರುವುದು ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ.
ಒಟ್ಟಿನಲ್ಲಿ, ಸಿಗರೇಟ್ ಬೆಲೆ ಏರಿಕೆ ಮತ್ತು ಕೃತಕ ಅಭಾವದ ಆರೋಪಗಳು ಮಾರುಕಟ್ಟೆಯಲ್ಲಿ ಗೊಂದಲ ಸೃಷ್ಟಿಸಿದ್ದು, ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳಿಂದ ಸ್ಪಷ್ಟನೆಗಾಗಿ ಗ್ರಾಹಕರು ಕಾಯುತ್ತಿದ್ದಾರೆ.
