ರಾಜ್ಯ ಸರ್ಕಾರ ಪೌರ ಕಾರ್ಮಿಕರಿಗೆ ಸಿಹಿ ಸುದ್ದಿ ನೀಡಿದ್ದು, ಇನ್ನುಮುಂದೆ ಪೌರ ಕಾರ್ಮಿಕರ ಜೊತೆ ಅಗೌರವದಿಂದ ನಡೆದುಕೊಳ್ಳುವುದು ಶಿಕ್ಷರ್ಹ ಅಪರಾಧವಾಗಿದೆ. ಸರ್ಕಾರ ಹೊರಡಿಸಿದ ಹೊಸ ಆದೇಶದ ಪ್ರಕಾರ, ಪೌರ ಕಾರ್ಮಿಕರೊಂದಿಗೆ ಸೌಹಾರ್ದಯುತವಾಗಿ ನಡೆದುಕೊಳ್ಳಬೇಕು.
ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ (MD) ಪತ್ರದ ಆಧಾರದ ಮೇಲೆ ಪೌರಾಡಳಿತ ಇಲಾಖೆ ಈ ಆದೇಶ ಹೊರಡಿಸಿದೆ.
ನಿಯಮ ಉಲ್ಲಂಘನೆ ಅಪರಾಧ
ಯಾರು ಪೌರ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದರೂ, ಅಥವಾ ಜಾತಿ ನಿಂದನೆ ಮಾಡಿದರೂ, ಅದು ದೌರ್ಜನ್ಯ ಕಾಯ್ದೆ ಅಡಿ ಶಿಕ್ಷಾರ್ಹ ಅಪರಾಧವೆಂದು ಪೌರಾಡಳಿತ ಇಲಾಖೆ ಸೂಚಿಸಿದೆ.
ಈ ನಿಯಮ ಪರಿಶೀಷ್ಟ ಜಾತಿ ಪಂಗಡದ ಸದಸ್ಯರ ವಿರುದ್ಧ ಜಾತಿ ಅವಮಾನ ಮಾಡುವುದರ ವಿರುದ್ಧವೂ ಹನ್ನಿಕೊಂಡಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗಿದೆ.