Ashwaveega News 24×7 ಮಾರ್ಚ್ 21 – 2026 : ದಾವಣಗೆರೆ ದಕ್ಷಿಣ ರಾಜಕೀಯದಲ್ಲಿ ಹೊಸ ತಿರುವು ಸಿಕ್ಕಿದೆ. ಕಾಂಗ್ರೆಸ್ ಟಿಕೆಟ್ ಹಂಚಿಕೆಯನ್ನು ಸುತ್ತುವರೆದಿರುವ ಗೊಂದಲ ಇದೀಗ ಕುತೂಹಲಕಾರಿ ಹಂತಕ್ಕೆ ತಲುಪಿದೆ.
ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಸಿಗುವ ನಿರೀಕ್ಷೆ ಇದ್ದರೂ, ಇದೀಗ ಆ ಸಮೀಕರಣಕ್ಕೆ ಶಾಕ್ ಸಿಗುವ ಸಾಧ್ಯತೆ ಹೆಚ್ಚಾಗಿದೆ. ಹೈಕಮಾಂಡ್ ಮಟ್ಟದಲ್ಲಿ ನಡೆದ ಚರ್ಚೆಗಳಲ್ಲಿ ಸಮರ್ಥ್ ಶಾಮನೂರು ಪರವಾದವೇ ಮೇಲುಗೈ ಸಾಧಿಸಿರುವ ಮಾಹಿತಿ ಲಭ್ಯವಾಗಿದೆ. ಇದರಿಂದ ಶಾಮನೂರು ಕುಟುಂಬದ ಮೊಮ್ಮಗನಿಗೆ ಕಾಂಗ್ರೆಸ್ ಟಿಕೆಟ್ ಬಹುತೇಕ ಖಚಿತ .
ಇದಕ್ಕೆ ಸಮಾನವಾಗಿ, ಮುಸ್ಲಿಂ ಮತದಾರರನ್ನು ಮನವೊಲಿಸಲು ಕಾಂಗ್ರೆಸ್ ಪಕ್ಷ ದೊಡ್ಡ ಮಟ್ಟದ ಗೇಮ್ ಪ್ಲಾನ್ ರೂಪಿಸುತ್ತಿದೆ. ಟಿಕೆಟ್ ನೀಡುವಲ್ಲಿ ಬದಲಾವಣೆ ಮಾಡಿದರೂ, ಮತಬ್ಯಾಂಕ್ ಕಾಪಾಡಿಕೊಳ್ಳಲು ವಿಶೇಷ ತಂತ್ರಗಳನ್ನು ಅನುಸರಿಸುವ ಸಾಧ್ಯತೆ ಇದೆ.
ಇನ್ನೊಂದೆಡೆ, ರಂಜಾನ್ ಸಂದರ್ಭದಲ್ಲಿ ಯಾವುದೇ ವಿವಾದ ಉಂಟಾಗದಂತೆ ನೋಡಿಕೊಳ್ಳಲು, ಆ ದಿನ ಟಿಕೆಟ್ ಘೋಷಣೆ ಮಾಡದೇ ಹೈಕಮಾಂಡ್ ತಾತ್ಕಾಲಿಕವಾಗಿ ಮೌನ ವಹಿಸಿದೆ. ಧಾರ್ಮಿಕ ಸಂವೇದನೆಗೆ ಗೌರವ ನೀಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ .
ಈಗ ಎಲ್ಲರ ಕಣ್ಣೂ ಕಾಂಗ್ರೆಸ್ ಬಿಡುಗಡೆ ಮಾಡಲಿರುವ ಅಭ್ಯರ್ಥಿಗಳ ಪಟ್ಟಿಯ ಮೇಲಿದ್ದು , ನಾಳೆ ಬೆಳಗ್ಗೆ ಅದನ್ನು ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆ ಇದೆ .
ಅಶ್ವವೇಗ ನ್ಯೂಸ್ಗೆ ಲಭಿಸಿರುವ ಉನ್ನತ ಮೂಲಗಳ ಮಾಹಿತಿ ಪ್ರಕಾರ, ಇದು ದಾವಣಗೆರೆ ರಾಜಕೀಯದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗುವ ಸಾಧ್ಯತೆ ಇದೆ .
