
ರಾಜಕೀಯ ವಲಯಕ್ಕೆ ಮಾತ್ರ ಸೀಮಿತವಾಗಿದ್ದ ಆರೋಪ ಪ್ರತ್ಯಾರೋಪದ ಕೆಸರಾಟ ಇದೀಗ ರಾಜಕೀಯ ಮೀರಿ ಕ್ರಿಕೆಟ್ ಲೋಕಕ್ಕೂ ಕಾಲಿಟ್ಟಿದೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬಗ್ಗೆ ಕಾಂಗ್ರೆಸ್ ವಕ್ತಾರೆ ಡಾ.ಶಾಮ ಟೀಕೆ ಮಾಡಿದ್ದಾರೆ. ನ್ಯೂಜಿಲೆಂಡ್ ವಿರುದ್ದ ನಡೆದ ಪಂದ್ಯದಲ್ಲಿ ರೋಹಿತ್ ಬ್ಯಾಟಿಂಗ್ನಲ್ಲಿ ಮತ್ತೆ ವಿಫಲರಾಗಿದ್ದರು.

ಇದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಡಾ.ಶಾಮ ರೋಹಿತ್ ಅಧಿಕ ದಪ್ಪ , ಅಲ್ಲದೇ ಭಾರತ ಕಂಡ ಪ್ರಭಾವಿಶಾಲಿಯಲ್ಲದ ನಾಯಕ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದೀಗ ಈ ಹೇಳಿಕೆಗೆ ಬಿಜೆಪಿ ವಕ್ತಾರ ಶೆಹಜಾದ್ ಪ್ರತಿಕ್ರಿಯಿಸಿದ್ದು ರಾಹುಲ್ ಗಾಂಧಿ ನಾಯಕತ್ವದಲ್ಲಿ 90 ಚುನಾವಣೆಗಳಲ್ಲಿ ಸೋತವರುರೋಹಿತ್ ಶರ್ಮಾ ನಾಯಕತ್ವವನ್ನು ಅದ್ಬುತವಲ್ಲ ಎಂದು ಕರೆಯುತ್ತಿದ್ದಾರೆ ಎಂದು ಟಾಂಗ್ ನೀಡಿದ್ದಾರೆ.
ಅಭಿಷೇಕ್ ಎಸ್