Ashwaveega News 24×7 ಫೆಬ್ರವರಿ 08 -2026 – ಬೆಂಗಳೂರು : ರಾಜ್ಯದಲ್ಲಿ ಈಗಾಗಲೇ ಮೆಟ್ರೋ ದರ ಏರಿಕೆಯ ಹೊರೆ ಹೊತ್ತಿರುವ ಜನರಿಗೆ ಮತ್ತೊಂದು ಆಘಾತ ಎದುರಾಗಿದೆ. ನಿತ್ಯ ಬಳಕೆಯ ದಿನಸಿ ವಸ್ತುಗಳ ಬೆಲೆಯಲ್ಲಿ ದಿಢೀರ್ ಏರಿಕೆ ಕಂಡುಬಂದಿದ್ದು, ಮಧ್ಯಮ ವರ್ಗದ ಕುಟುಂಬಗಳ ಮನೆ ಬಜೆಟ್ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಅತ್ಯಾವಶ್ಯಕ ಆಹಾರ ವಸ್ತುಗಳಾದ ಅಕ್ಕಿ, ಬೇಳೆ-ಕಾಳು, ಮೆಣಸು ಸೇರಿದಂತೆ ಹಲವಾರು ವಸ್ತುಗಳ ಬೆಲೆ ಗಣನೀಯವಾಗಿ ಹೆಚ್ಚಾಗಿದೆ. ವಿಶೇಷವಾಗಿ,
- ಸೋನಾ ಮಸೂರಿ ಅಕ್ಕಿ ಕೆಜಿಗೆ ₹70 ರಿಂದ ₹77ಕ್ಕೆ ಏರಿಕೆ
- ಬಾಸುಮತಿ ಅಕ್ಕಿ ಕೆಜಿಗೆ ₹90 ರಿಂದ ₹130ಕ್ಕೆ ಜಿಗಿತ
- ಒಣಮೆಣಸು ಕೆಜಿಗೆ ₹200 ರಿಂದ ₹500ಕ್ಕೆ ಏರಿಕೆ
- ಶೇಂಗಾ ಬೀಜ ಕೆಜಿಗೆ ₹140 ರಿಂದ ₹200ಕ್ಕೆ ಹೆಚ್ಚಳ
- ಧನಿಯಾ ಕೆಜಿಗೆ ₹160 ರಿಂದ ₹220ಕ್ಕೆ ಏರಿಕೆ
- ತೊಗರಿ ಬೇಳೆ ರೂ.110 ರಿಂದ ₹135ಕ್ಕೆ ಏರಿಕೆ
- ಉದ್ದಿನ ಬೇಳೆ ರೂ.100 ರಿಂದ ₹120ಕ್ಕೆ ಏರಿಕೆಯಾಗಿದೆ
ನಿತ್ಯ ಬಳಕೆಯ ವಸ್ತುಗಳೇ ಈ ರೀತಿ ದುಬಾರಿಯಾಗುತ್ತಿರುವುದರಿಂದ ಸಾಮಾನ್ಯ ಜನರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಳ, ಸಾಗಣೆ ವೆಚ್ಚ ಹಾಗೂ ಇತರೆ ಕಾರಣಗಳನ್ನು ವ್ಯಾಪಾರಿಗಳು ದರ ಏರಿಕೆಗೆ ಕಾರಣವೆಂದು ಹೇಳುತ್ತಿದ್ದರೂ, ಅದರ ನೇರ ಹೊರೆ ಗ್ರಾಹಕರ ಮೇಲೇ ಬೀಳುತ್ತಿದೆ.
ವಿದ್ಯುತ್, ಸಾರಿಗೆ, ಶಿಕ್ಷಣ ವೆಚ್ಚಗಳ ಬಳಿಕ ಈಗ ದಿನಸಿ ವಸ್ತುಗಳ ಬೆಲೆ ಏರಿಕೆ ಮಧ್ಯಮ ವರ್ಗದ ಜನರ ಬದುಕಿಗೆ ಮತ್ತಷ್ಟು ಕಠಿಣತೆ ತಂದೊಡ್ಡಿದೆ ಎಂದು ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ.
