Ashwaveega News 24×7 ಮಾರ್ಚ್ 17 – 2026 : ಕನ್ನಡ ಚಿತ್ರರಂಗದ ನಟ Darshan Thoogudeepa ಸಂಬಂಧಿಸಿದ ಪ್ರಕರಣದಲ್ಲಿ ಇಂದು ಮಹತ್ವದ ಬೆಳವಣಿಗೆಗಳಾಗುವ ಸಾಧ್ಯತೆ ಇದೆ. ಈ ಪ್ರಕರಣದಲ್ಲಿ ತನಿಖೆ ನಡೆಸಿದ ಪೊಲೀಸರೇ ಆರೋಪಿ ಆಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆಯೇ ಎಂಬ ಕುತೂಹಲ ಮೂಡಿದೆ.
ಪ್ರಕರಣದ ತನಿಖಾಧಿಕಾರಿಯನ್ನೇ ಆರೋಪಿ ಮಾಡುವಂತೆ ಅರ್ಜಿ ಸಲ್ಲಿಸಲಾಗಿದೆ. ಸುಳ್ಳು ಸಾಕ್ಷ್ಯ ಸೃಷ್ಟಿಸಿದ ಆರೋಪದಡಿ ಕಾಮಾಕ್ಷಿಪಾಳ್ಯ ಠಾಣೆಯ ಇನ್ಸ್ಪೆಕ್ಟರ್ ವಿರುದ್ಧ ಆರೋಪ ಕೇಳಿಬಂದಿದೆ. A-3 ಪವನ್ ಪರ ವಕೀಲ Sudhanva ಈ ಸಂಬಂಧ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಈ ಅರ್ಜಿಯ ಕುರಿತು ಇಂದು ಟ್ರಯಲ್ ಕೋರ್ಟ್ ಆದೇಶ ಪ್ರಕಟವಾಗಲಿದ್ದು, ಎಲ್ಲರ ಗಮನ ಕೋರ್ಟ್ ತೀರ್ಪಿನತ್ತ ನೆಟ್ಟಿದೆ. ಆರೋಪಿ ಪರ ವಕೀಲರು ಮೇಲುಗೈ ಸಾಧಿಸುತ್ತಾರಾ ಅಥವಾ ತನಿಖಾಧಿಕಾರಿಗಳ ಕ್ರಮಕ್ಕೆ ಮನ್ನಣೆ ಸಿಗುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ .
ಇದರ ಜೊತೆಗೆ, ಜೈಲುವಾಸದಲ್ಲಿರುವ ದರ್ಶನ್ ಅವರಿಗೆ ಇಂದು ಮತ್ತೊಂದು ಮಹತ್ವದ ದಿನವಾಗಿದೆ. ಕುಟುಂಬಸ್ಥರ ಭೇಟಿಗೆ ಅವಕಾಶ ನೀಡುವಂತೆ ಅವರು ಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ಈಗಾಗಲೇ ಮುಗಿದಿದ್ದು, ಇಂದು ಸೆಷನ್ಸ್ ಕೋರ್ಟ್ ಆದೇಶ ಹೊರಬೀಳಲಿದೆ .
ಕುಟುಂಬಸ್ಥರನ್ನು ಭೇಟಿಯಾಗಲು ಅವಕಾಶ ಸಿಗುವ ವಿಶ್ವಾಸದಲ್ಲಿ ದರ್ಶನ್ ಇದ್ದಾರೆ . ಈ ಎರಡೂ ವಿಷಯಗಳ ಕುರಿತು ಇಂದು ಹೊರಬರುವ ತೀರ್ಪು ಪ್ರಕರಣದ ಮುಂದಿನ ಹಂತಕ್ಕೆ ದಿಕ್ಕು ತೋರಿಸಲಿದೆ .
