ದರ್ಶನ್ ಜೈಲಿಗೆ ಹೋಗಿ ಬಂದ್ರು ಅವ್ರ ಕ್ರೇಜ್ ಅಂತೂ ಏನು ಕಡಿಮೆ ಆಗಿಲ್ಲ.ಯಾಕಂದ್ರೆ ಅದಕ್ಕೆ ಬೆಸ್ಟ್ ಎಕ್ಸಾಮ್ಪಾಲ್ ಅಂದ್ರೆ ಇವತ್ತು ರೀ ರಿಲೀಸ್ ಆದ ನವಗ್ರಹ ಸಿನಿಮಾ.ಈ ಹಿಂದೆ ದರ್ಶನ್ ಜೈಲಲ್ಲಿ ಇದ್ದಾಗಲೂ ಅವರು ನಟಿಸಿದ ಮೂರು ಸಿನಿಮಾಗಳು ರೀ ರಿಲೀಸ್ ಆಗಿದ್ದವು.ಇದೀಗ ದರ್ಶನ್ ಅವ್ರು ಮಧ್ಯಂತರ ಜಾಮೀನು ಸಿಕ್ಕಿದ ನಂತ್ರ ರಿಲೀಸ್ ಆಗುವ ಮೊದಲ ಸಿನಿಮಾ ನವಗ್ರಹ. ಈ ಸಿನಿಮಾಗಾಗಿ ದರ್ಶನ್ ಫ್ಯಾನ್ಸ್ ಮಾತ್ರ ತುದಿಗಾಲಲ್ಲಿ ನಿಂತು ವೇಟ್ ಮಾಡ್ತಾ ಇದ್ರೂ.ಇದೀಗ ಈ ಸಿನಿಮಾ ರೀ ರಿಲೀಸ್ ಆಗಿದ್ದು ದರ್ಶನ್ ಫ್ಯಾನ್ಸ್ ಸೆಲೆಬ್ರೇಶನ್ ಅಂತೂ ಜೋರಾಗಿಯೇ ಇದೆ.
ದರ್ಶನ್ ವೃತ್ತಿ ಬದುಕಿನಲ್ಲೇ ‘ನವಗ್ರಹ’ ಸಿನಿಮಾ ವಿಶೇಷವಾಗಿ ನಿಲ್ಲುತ್ತೆ. ಸುಮಾರು 16 ವರ್ಷಗಳ ಹಿಂದೇನೆ ಕನ್ನಡ ಚಿತ್ರರಂಗದಲ್ಲಿ ಇಂತಹದ್ದೊಂದು ಪ್ರಯತ್ನಕ್ಕೆ ಮುಂದಾಗಿತ್ತು. ಕನ್ನಡ ಚಿತ್ರರಂಗದ ದಿಗ್ಗಜ ಖಳನಾಯಕರ ಮಕ್ಕಳನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿತ್ತು. ಈ ಪ್ರಯತ್ನಕ್ಕೆ ಕನ್ನಡಿಗರು ಕೂಡ ಮನಸೋತಿದ್ದರು .ಇದೇ ಸಿನಿಮಾ ಈಗ 16 ವರ್ಷಗಳ ಬಳಿಕ ಮತ್ತೆ ಮರು ಬಿಡುಗಡೆಯಾಗುತ್ತಿದೆ. ಕಳೆದ ಒಂದು ವಾರದಿಂದಲೇ ದರ್ಶನ್ ಫ್ಯಾನ್ಸ್ ಸೆಲೆಬ್ರೆಷನ್ ಮಾಡುತ್ತಿದ್ದಾರೆ. ಇಂದು ಅದ್ಧೂರಿಯಾಗಿ ರೀ- ರಿಲೀಸ್ ಆಗಿರುವ ಈ ಸಿನಿಮಾಗೆ ಥಿಯೇಟರ್ಗಳಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ತೆರೆಮೇಲೆ ಮತ್ತೆ ದರ್ಶನ್ ನೋಡಿ ಫ್ಯಾನ್ಸ್ ಆರ್ಭಟಿಸುತ್ತಿದ್ದಾರೆ.
ಮೈಸೂರಿನ ಅಂಬಾರಿ ಲೂಟಿ ಮಾಡಲು ಸಂಚು ಹಾಕುವ ಈ ರೋಚಕ ಕಥೆಯನ್ನು ತೆರೆಮೇಲೆ ತರಲಾಗಿತ್ತು. ದಿನಕರ್ ತೂಗುದೀಪ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದರು. ವಿನೋದ್ ಪ್ರಭಾಕರ್, ತರುಣ್ ಸುಧೀರ್, ಸೃಜನ್ ಲೋಕೇಶ್, ಧರ್ಮ ಕೀರ್ತಿರಾಜ್, ನಾಗೇಂದ್ರ ಅರಸ್, ಶರ್ಮಿಳಾ ಮಾಂಡ್ರೆ ಅಂತಹ ದೊಡ್ಡ ಸ್ಟಾರ್ ಕಾಸ್ಟ್ ಈ ಸಿನಿಮಾದಲ್ಲಿತ್ತು. ಈಗ ಮತ್ತೆ ಆ ಸಿನಿಮಾ ನೋಡುವುದಕ್ಕೆ ಥಿಯೇಟರ್ ಮುಂದೆ ಕ್ರೇಜ್ ಜೋರಾಗಿಯೇ ಇದೆ. ಥಿಯೇಟರ್ ಮುಂದೆ ದರ್ಶನ್ ಅಭಿಮಾನಿಗಳ ಕ್ರೇಜ್ ಏನೂ ಕಮ್ಮಿಯಿಲ್ಲ. ಪ್ರತಿ ಸಿನಿಮಾ ರೀ ರಿಲೀಸ್ ಆದಂತೆ ಈ ಬಾರಿ ಕೂಡ ಥಿಯೇಟರ್ ಮುಂದೆ ಜಮಾಯಿಸಿದ್ದಾರೆ. ಬೆಳಗ್ಗೆ 7.30ರ ಶೋನಿಂದಲೇ ಫ್ಯಾನ್ಸ್ ಸಂಭ್ರಮಿಸುವುದಕ್ಕೆ ಶುರು ಮಾಡಿದ್ದಾರೆ. “Re-releaseಗೂ ಈ ತರ ಕ್ರೇಜ್ ಇರೋ ಒಬ್ರೇ ಒಬ್ಬ ನಟ ಅಂದ್ರೆ ಅದು ನಮ್ ಡಿಬಾಸ್” ಎನ್ನುತ್ತಿದ್ದಾರೆ ಫ್ಯಾನ್ಸ್.
ಇನ್ನು ಥಿಯೇಟರ್ ಒಳಗೆ ಅಭಿಮಾನಿಗಳು ಸೆಲೆಬ್ರೆಷನ್ ಏನೂ ಕಮ್ಮಿಯಿಲ್ಲ. ಸ್ಕ್ರೀನ್ ಮುಂದೆ ಅಭಿಮಾನಿಗಳು ಕುಣಿಯುತ್ತಿದ್ದಾರೆ. ‘ನವಗ್ರಹ’ ಸಿನಿಮಾದ ಹಾಡುಗಳು ಹಾಗೂ ದರ್ಶನ್ ಡೈಲಾಗ್ ಬಂದಾಗ ಫ್ಯಾನ್ಸ್ ಥಿಯೇಟರ್ನಲ್ಲಿಯೇ ನಿಲ್ಲುತ್ತಿಲ್ಲ. ಕೆಲವರಂತೂ ಬಾಸ್ ಈಸ್ ಬ್ಯಾಕ್ ಅಂತ ಕೇಕೆ ಹಾಕುತ್ತಾ ಕುಣಿಯುತ್ತಿದ್ದಾರೆ.