Ashwaveega News 24×7 ಏಪ್ರಿಲ್ 8 – 2026 : ದಾವಣಗೆರೆ ರಾಜಕೀಯ ರಣಕಣ ಇದೀಗ ಹೈವೋಲ್ಟೇಜ್ ಹಂತಕ್ಕೇರಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಸಮರ್ಥ್ ಎಸ್.ಎಂ ಮತ್ತು ಶ್ರೀನಿವಾಸ ದಾಸಕರಿಯಪ್ಪ ನಡುವಿನ ಪೈಪೋಟಿ ಕಣವನ್ನು ರೋಚಕಗೊಳಿಸಿದೆ. ಉಪಚುನಾವಣೆಯ ಟ್ರೆಂಡ್ ಯಾರ ಕಡೆ ತಿರುಗುತ್ತಿದೆ ಎಂಬುದರ ಮೇಲೆ ರಾಜ್ಯದ ರಾಜಕೀಯ ಕಣ್ಣು ನೆಟ್ಟಿದೆ.
ದಾವಣಗೆರೆಯಲ್ಲಿ ಕಾಂಗ್ರೆಸ್ ಪರವಾಗಿ ಅನುಕಂಪದ ಅಲೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ನಿಧನದ ನಂತರ ಅವರ ಕುಟುಂಬದ ಮೇಲೆ ಇರುವ ಪ್ರಭಾವ ಇನ್ನೂ ಗಟ್ಟಿಯಾಗಿದೆ.
ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮತ್ತು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಪ್ರಭಾವ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದೆ.ಇದಲ್ಲದೆ, ಶಾಮನೂರು ಕುಟುಂಬದ ಬಿಗಿ ಹಿಡಿತ ಕಾಂಗ್ರೆಸ್ಗೆ ದೊಡ್ಡ ಬಲವಾಗಿದೆ.
ಸಾದಿಕ್ ಪೈಲ್ವಾನ್ ಕಣದಿಂದ ಹಿಂದೆ ಸರಿದಿರುವುದು ಸಮೀಕರಣ ಬದಲಿಸಿದೆ.
ಮುಸ್ಲಿಂ ಮತದಾರರ ಅಸಮಾಧಾನ ಶಮನಕ್ಕೆ ಕಾಂಗ್ರೆಸ್ ನಿರಂತರ ಪ್ರಯತ್ನ ನಡೆಸುತ್ತಿದೆ.
ಡಿಸಿಎಂ ಡಿ.ಕೆ. ಶಿವಕುಮಾರ್ ರಣತಂತ್ರದ ಜೊತೆಗೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಮತಬೇಟೆ ಕಾಂಗ್ರೆಸ್ಗೆ ಬಲ ತುಂಬುತ್ತಿದೆ. ಲಿಂಗಾಯತ ಹಾಗೂ ಮುಸ್ಲಿಂ ಮತಗಳ ಸಮೀಕರಣ ಕಾಂಗ್ರೆಸ್ಗೆ ಗೆಲುವಿನ ವಿಶ್ವಾಸ ನೀಡುತ್ತಿದೆ.
ಇದ್ರ ನಡುವೆಯೇ ಕೆಲವು ಸವಾಲುಗಳೂ ಇವೆ.
ಕುಟುಂಬ ರಾಜಕಾರಣದ ಆರೋಪ ಕಾಂಗ್ರೆಸ್ಗೆ ತಲೆನೋವಾಗಿದೆ.
ಜೆನ್-ಝಿ ಅಭ್ಯರ್ಥಿ ಎಂಬ ಟ್ಯಾಗ್ ಹಾಗೂ ರಾಜಕೀಯ ಅನುಭವದ ಕೊರತೆ ಪ್ರಶ್ನೆ ಎಬ್ಬಿಸಿದೆ.
ಮುಸ್ಲಿಂ ಸಮುದಾಯದಲ್ಲಿ ಇನ್ನೂ ಮಡುಗಟ್ಟಿರುವ ಅತೃಪ್ತಿ ಸಂಪೂರ್ಣವಾಗಿ ದೂರವಾಗಿಲ್ಲ.
ಕಣದಲ್ಲಿ 13 ಮುಸ್ಲಿಂ ಅಭ್ಯರ್ಥಿಗಳಿರುವುದು ಮತ ವಿಭಜನೆಗೆ ಕಾರಣವಾಗಬಹುದು.
ಸಚಿವ ಜಮೀರ್ ಅಹ್ಮದ್ ಹಾಗೂ MLC ಅಬ್ದುಲ್ ಜಬ್ಬಾರ್ ಗೈರು ಹಾಜರಿ ಕೂಡ ಚರ್ಚೆಗೆ ಗ್ರಾಸವಾಗಿದೆ.
ದಾವಣಗೆರೆ ಉಪಸಮರದಲ್ಲಿ ಕಾಂಗ್ರೆಸ್ಗೆ ಸ್ವಲ್ಪ ಮೇಲುಗೈ ಕಂಡು ಬರುತ್ತಿದೆಯಾದರೂ, ಅಂತಿಮ ಫಲಿತಾಂಶ ಮತದಾನದ ಶೇಕಡಾವಾರು ಮತ್ತು ಸಮೀಕರಣಗಳ ಮೇಲೆ ಅವಲಂಬಿತವಾಗಿದೆ.
ಹೈವೋಲ್ಟೇಜ್ ಕಣದಲ್ಲಿನ ಪ್ರತಿಯೊಂದು ಚಲನವಲನ ಕೂಡ ಫಲಿತಾಂಶದ ದಿಕ್ಕು ತೀರ್ಮಾನಿಸಲಿದೆ.
