Ashwaveega News 24×7 ಫೆಬ್ರವರಿ 09 -2026 – ಬೆಂಗಳೂರು : ನಟ ದರ್ಶನ್ ವಿಚಾರವಾಗಿ ನಡೆಯುತ್ತಿರುವ ಟೀಕೆ–ವಿರೋಧಗಳ ನಡುವೆಯೇ, ನಟ ಧನ್ವೀರ್ ದರ್ಶನ್ ವಿರೋಧಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಅಶ್ವವೇಗ ನ್ಯೂಸ್ಗೆ ನೀಡಿದ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ಧನ್ವೀರ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
“ಬರ್ತಾರೆ… ಬರ್ತಾರೆ… ಮುಂದೆ ದರ್ಶನ್ ಆಚೆ ಬರ್ತಾರೆ. ಆರಾಮಾಗಿ, ತಾಳ್ಮೆಯಿಂದ ಎಲ್ಲವನ್ನೂ ಫೇಸ್ ಮಾಡೋಣ. ಎಲ್ಲರಿಗೂ ಉತ್ತರ ಕೊಡೋ ಟೈಂ ಬಂದೇ ಬರುತ್ತೆ” ಎಂದು ಧನ್ವೀರ್ ಹೇಳಿದ್ದಾರೆ.
ಇನ್ನು, “ದರ್ಶನ್ ವಿರುದ್ಧ ಬೇಕಾಬಿಟ್ಟಿ ಆರೋಪ ಮಾಡೋದು ಸರಿಯಲ್ಲ. ಸಮಯ ಬಂದಾಗ ಎಲ್ಲಕ್ಕೂ ಸ್ಪಷ್ಟ ಉತ್ತರ ಸಿಗಲಿದೆ” ಎಂದು ಅವರು ಎಚ್ಚರಿಕೆ ನೀಡಿದರು.
ಈ ನಡುವೆ, “35 ಲಕ್ಷ ರೂಪಾಯಿ ತಗೊಂಡು ವಾಪಸ್ ಕೊಟ್ಟಿಲ್ಲ” ಎಂಬ ಕನಕಪುರ ಶ್ರೀನಿವಾಸ್ ಆರೋಪಕ್ಕೆ ಧನ್ವೀರ್ ತೀವ್ರ ಕೌಂಟರ್ ನೀಡಿದ್ದಾರೆ. “ಆರೋಪ ಮಾಡೋದಕ್ಕೆ ಮೊದಲು ಸತ್ಯ ಏನು ಅಂತ ನೋಡಬೇಕು. ಕೇವಲ ಹೇಳಿಕೆಗಳಿಂದ ಸತ್ಯ ಬದಲಾಗೋದಿಲ್ಲ” ಎಂದು ಧನ್ವೀರ್ ಪ್ರತಿಕ್ರಿಯಿಸಿದ್ದಾರೆ.
ದರ್ಶನ್ ವಿಚಾರ ಇದೀಗ ಮತ್ತಷ್ಟು ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಧನ್ವೀರ್ ಹೇಳಿಕೆಗಳು ಅಭಿಮಾನಿಗಳ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿವೆ.
