Ashwaveega News 24×7 ಫೆಬ್ರವರಿ 09 -2026 – ಬೆಂಗಳೂರು : ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸುಮಾರು 90 ಶಾಸಕರ ಬೆಂಬಲವಿದೆ ಎಂಬ ಬಿಗ್ ರಿವೀಲ್ ಕನಕಪುರ ಕ್ಯಾಂಪ್ನಿಂದ ಹೊರಬಿದ್ದಿದೆ. ಡಿಕೆಶಿ ಆಪ್ತ ಹಾಗೂ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ನೀಡಿದ ಸ್ಫೋಟಕ ಹೇಳಿಕೆಗಳು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿವೆ.
ಬೆಂಗಳೂರಿನಲ್ಲಿ ಮಾತನಾಡಿದ ಶಾಸಕ ಇಕ್ಬಾಲ್ ಹುಸೇನ್, “ಡಿಸಿಎಂ ಡಿಕೆ ಬಳಿ 90 ಶಾಸಕರ ಬಲ ಇದೆ. ಇದು ಬಲಾಬಲದ ಹಿಂಟ್. ಸಿದ್ದು ಬಣಕ್ಕೆ ನಾವು ಮನವಿ ಮಾಡುತ್ತೇವೆ. ನಮ್ಮನ್ನ ಪ್ರವೋಕ್ ಮಾಡಬೇಡಿ” ಎಂದು ಎಚ್ಚರಿಕೆ ನೀಡಿದರು.
“ಇದೇ ಅವಧಿಯಲ್ಲಿ ಡಿಕೆಶಿ ಸಿಎಂ ಆಗಬೇಕು. ಡಿಕೆಶಿ ಅವರಿಗೆ ಕೂಡ ಸಿಎಂ ಅವಕಾಶ ಕೊಡಬೇಕು. ಸುಮ್ನೆ ಬಲಾಬಲ ಪರೀಕ್ಷೆಗೆ ಅವಕಾಶ ಕೊಡಬೇಡಿ” ಎಂದು ಅವರು ಸ್ಪಷ್ಟವಾಗಿ ಹೇಳಿದರು.
ಮುಂದುವರೆದು ಸಿಎಂ ಸಿದ್ದರಾಮಯ್ಯ ಅವರಿಗೆ ನೇರ ಸವಾಲ್ ಹಾಕಿದ ಇಕ್ಬಾಲ್ ಹುಸೇನ್, “ಸಿದ್ದರಾಮಯ್ಯನವ್ರೇ, ಮಾತು ಮಾತಿಗೂ ಸಾಮಾಜಿಕ ನ್ಯಾಯ ಅಂತೀರಾ. ಮಾತಿಗೆ ತಕ್ಕಂತೆ ಸಾಮಾಜಿಕ ನ್ಯಾಯದಂತೆ ನಡೆದುಕೊಳ್ಳಿ” ಎಂದು ಆಗ್ರಹಿಸಿದರು.
“ಡಿ.ಕೆ. ಶಿವಕುಮಾರ್ ಅವರು ಈಗಲೇ ಸಿಎಂ ಆಗಬೇಕು. ಡಿಕೆ ಸಿಎಂ ಆಗಬೇಕು ಅನ್ನೋದು ಹಲವು ಶಾಸಕರ ಅಭಿಲಾಷೆ. ಡಿಕೆ ಒಬ್ಬ ನಿಷ್ಠಾವಂತ ನಾಯಕ. ಅಧಿಕಾರಕ್ಕೆ ಪಕ್ಷ ನಿಷ್ಠೆ ಬರಬೇಕು” ಎಂದು ಹೇಳಿದರು. ಡಿಕೆಶಿ ಅವರ ಹೋರಾಟ ಹಾಗೂ ಶ್ರಮಕ್ಕೆ ತಕ್ಕ ಬೆಲೆ ಸಿಗಬೇಕು ಎಂದು ಹೇಳಿದ ಇಕ್ಬಾಲ್ ಹುಸೇನ್, ಕಾಂಗ್ರೆಸ್ ಒಳಗಿನ ಶಕ್ತಿ ಸಮೀಕರಣಗಳ ಬಗ್ಗೆ ಬಿಗ್ ಸಿಗ್ನಲ್ ನೀಡಿದ್ದಾರೆ.
ಕನಕಪುರ ಕ್ಯಾಂಪ್ನಿಂದ ಬಂದ ಈ ಹೇಳಿಕೆಗಳು ಕಾಂಗ್ರೆಸ್ ಒಳರಾಜಕಾರಣದಲ್ಲಿ ಹೊಸ ತಿರುವು ನೀಡಿದ್ದು, ಮುಂದಿನ ದಿನಗಳಲ್ಲಿ ಸಿಎಂ–ಡಿಸಿಎಂ ನಡುವಿನ ಶಕ್ತಿ ಸಮೀಕರಣ ಇನ್ನಷ್ಟು ಚರ್ಚೆಗೆ ಗ್ರಾಸವಾಗುವ ಲಕ್ಷಣಗಳು ಕಾಣಿಸುತ್ತಿವೆ.
