Ashwaveega News 24×7 ಮಾರ್ಚ್ 13– 2026 : AI ಬಗ್ಗೆ ರಾಜ್ಯ ವಿಧಾನ ಪರಿಷತ್ನಲ್ಲಿ ಆಸಕ್ತಿದಾಯಕ ಚರ್ಚೆ ನಡೆಯಿತು. ಈ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಸ್ಸಾಂ ಚುನಾವಣೆಯ ಬಗ್ಗೆ ಎಐಗೆ ಕೇಳಿದ ಪ್ರಶ್ನೆಯನ್ನು ಪ್ರಸ್ತಾಪಿಸಿ ಸದನದಲ್ಲಿ ಕುತೂಹಲ ಮೂಡಿಸಿದರು.
ಅಸ್ಸಾಂನಲ್ಲಿ ಚುನಾವಣೆ ಗೆಲ್ಲುವುದು ಹೇಗೆ ಎಂದು ಎಐಗೆ ಪ್ರಶ್ನೆ ಕೇಳಿದ್ದಾಗಿ ಡಿಕೆಶಿ ಹೇಳಿದರು. ಅದಕ್ಕೆ “ಕರ್ನಾಟಕ ಮಾದರಿಯನ್ನು ಅನುಸರಿಸಿ” ಎಂಬ ಉತ್ತರ ಬಂದಿದೆ ಎಂದು ಅವರು ಹಾಸ್ಯಮಿಶ್ರಿತವಾಗಿ ಹೇಳಿಕೊಂಡರು.
ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಅವರು ರಾಜ್ಯ ಆಡಳಿತದಲ್ಲಿ ಎಐ ಬಳಕೆ ಕುರಿತು ಪ್ರಶ್ನೆ ಕೇಳಿದಾಗ ಡಿ.ಕೆ. ಶಿವಕುಮಾರ್ ಈ ವಿಚಾರವನ್ನು ಉಲ್ಲೇಖಿಸಿದರು . ಎಐ ಬಳಕೆ ಬಗ್ಗೆ ತೀರ್ಮಾನಿಸುವ ಮೊದಲು ಸಮಗ್ರ ಸಂಶೋಧನೆ ಅಗತ್ಯವಿದೆ .
ಎಐ ಸ್ವತಃ ಹೊಸದಾಗಿ ಏನನ್ನೂ ಸೃಷ್ಟಿ ಮಾಡುವುದಿಲ್ಲ. ಅದರಲ್ಲಿ ನಾವು ಯಾವ ಮಾಹಿತಿಯನ್ನು ನೀಡುತ್ತೇವೋ ಅದೇ ಆಧಾರದ ಮೇಲೆ ಉತ್ತರಗಳು ಬರುತ್ತವೆ ಎಂದು ಡಿಕೆಶಿ ವಿವರಿಸಿದರು.
ಈ ಕಾರಣದಿಂದ ಎಐ ಬಳಕೆಯ ಬಗ್ಗೆ ತಕ್ಷಣ ನಿರ್ಧಾರ ತೆಗೆದುಕೊಳ್ಳುವುದು ಸುಲಭವಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಆದರೆ ಇದೇ ವೇಳೆ ಅಸ್ಸಾಂ ಚುನಾವಣೆಯನ್ನು ಗೆಲ್ಲುವ ಬಗ್ಗೆ ಎಐಗೆ ಕೇಳಿದ ಪ್ರಶ್ನೆಯನ್ನು ಉದಾಹರಣೆಯಾಗಿ ಪ್ರಸ್ತಾಪಿಸಿ ಸದನದಲ್ಲಿ ಚರ್ಚೆಗೆ ಕಾರಣವಾದರು.
ಒಟ್ಟಾರೆ, ರಾಜಕೀಯದಲ್ಲಿಯೂ ಎಐ ಪ್ರಭಾವ ಹೆಚ್ಚುತ್ತಿರುವುದಕ್ಕೆ ಇದು ಒಂದು ಉದಾಹರಣೆ ಎಂಬ ಮಾತುಗಳು ಕೇಳಿಬರುತ್ತಿವೆ.
