
ಪೇರಳೆ ಎಲೆಗಳ ನೀರನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಇದರ ಎಲೆಗಳು ಪಾಲಿಫಿನಾಲ್ ಗುಣಲಕ್ಷಣಗಳನ್ನು ಹೊಂದಿದ್ದು, ಆಹಾರದಿಂದ ಕಾರ್ಬೋಹೈಡ್ರೇಟ್ಗಳ ಹೀರಿಕೊಳ್ಳುವಿಕೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಬ್ಲಡ್ ಶುಗರ್ ಏರುವುದನ್ನು ತಡೆಯುತ್ತದೆ. ಇದನ್ನೂ ಓದಿ
ಅಧಿಕ ತೂಕದಿಂದಾಗಿ ಅನೇಕ ಮಂದಿ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ತೂಕ ಇಳಿಸಿಕೊಳ್ಳಲು ಬಹುತೇಕ ಮಂದಿ ನಾನಾ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಮೇಲ್ನೋಟಕ್ಕೆ ಇದು ಸುಲಭವಾಗಿ ಕಂಡರೂ ಬಹಳ ಮಂದಿಗೆ ಇದು ಸಾಹಸವಿದ್ದಂತೆ. ಕೆಲವರು ಜಿಮ್, ಯೋಗ, ಡಯೆಟ್, ವರ್ಕೌಟ್ ಹೀಗೆ ಹಲವಾರು ಸರ್ಕಸ್ಗಳನ್ನು ಮಾಡುವ ಮೂಲಕ ಬೆವರಿಳಿಸುತ್ತಾರೆ. ಮತ್ತೆ ಕೆಲವರು ಆಹಾರ ಪದ್ಧತಿಯನ್ನು ಅನುಸರಿಸುತ್ತಾರೆ. ಹೀಗಿದ್ದರೂ ಈ ಪ್ರಯತ್ನಗಳ ನಂತರವೂ ಕೇವಲ ಒಂದೆರಡು ಕೆಜಿಗಳಷ್ಟು ಮಾತ್ರವೇ ಇಳಿದು ನಿರಾಸೆಗೊಳ್ಳುತ್ತಾರೆ ಅಲ್ವಾ .
ಬೊಜ್ಜು ನಮ್ಮಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರು ಸಾಧ್ಯವಾದಷ್ಟು ಬೇಗನೇ ತೂಕ ಇಳಿಸಿಕೊಳ್ಳುವುದು ಉತ್ತಮ. ಇದಕ್ಕಾಗಿ ಪ್ರತಿದಿನ ಬೆಳಗ್ಗೆ ಕೇವಲ ಪೇರಳೆ ಎಲೆಯನ್ನು ಜಗಿದರೆ ಸಾಕು, ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು. ಇದಲ್ಲದೇ ಬೊಜ್ಜು ನಮ್ಮಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರು ಸಾಧ್ಯವಾದಷ್ಟು ಬೇಗನೇ ತೂಕ ಇಳಿಸಿಕೊಳ್ಳುವುದು ಉತ್ತಮ. ಇದಕ್ಕಾಗಿ ಪ್ರತಿದಿನ ಬೆಳಗ್ಗೆ ಕೇವಲ ಪೇರಳೆ ಎಲೆಯನ್ನು ಜಗಿದರೆ ಸಾಕು, ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು.
ಸದ್ಯ ಚಳಿಗಾಲ ಶುರುವಾಗಿದೆ. ಜನರು ಶೀತ, ಜ್ವರ, ಕೀಲು ನೋವು ಇತ್ಯಾದಿಗಳಿಂದ ಬಳಲುತ್ತಿದ್ದಾರೆ. ಇಂತಹ ವೇಳೆ ನೀವು ಪ್ರತಿದಿನ ಪೇರಳೆ ಎಲೆಗಳನ್ನು ತಿನ್ನುವ ಮೂಲಕ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಪೇರಳೆ ದೇಹಕ್ಕೆ ಮಾತ್ರ ಪ್ರಯೋಜನಕಾರಿಯಲ್ಲ. ಇದರ ಎಲೆಗಳು ಸಹ ಉಪಯುಕ್ತವಾಗಿವೆ. ಪೇರಳೆ ಎಲೆಗಳನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಜೀರ್ಣಕ್ರಿಯೆ ಸಮಸ್ಯೆ ನಿವಾರಣೆಯಾಗುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಅಜೀರ್ಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪೇರಳೆ ಎಲೆಗಳಲ್ಲಿ ಕಂಡುಬರುವ ಪೊಟ್ಯಾಸಿಯಮ್ ಹೃದಯಕ್ಕೆ ಸಹ ಪ್ರಯೋಜನಕಾರಿಯಾಗಿದೆ. ಈ ಹಣ್ಣಿನ ಎಲೆಗಳನ್ನು ತಿನ್ನುವುದರಿಂದ ಜ್ವರ, ತಲೆನೋವು ಮತ್ತು ಕೀಲು ನೋವು ನಿವಾರಣೆಯಾಗುತ್ತದೆ.
ಪೇರಳೆ ಎಲೆಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ. ಇದು ಪೇರಳೆಕ್ಕಿಂತ ಹೆಚ್ಚು ಪೌಷ್ಟಿಕಾಂಶ ಹೊಂದಿದ್ದು, ಸಾಕಷ್ಟು ಪ್ರಯೋಜನಕಾರಿ ಆಗಿದೆ ಎಂದು ಹೇಳಲಾಗುತ್ತದೆ. ಪೇರಳೆ ಎಲೆಗಳಲ್ಲಿ ಹಲವಾರು ಔಷಧೀಯ ಗುಣಗಳಿವೆ. ಇದು ಜೀವಸತ್ವಗಳು, ಖನಿಜಗಳು, ಸೂಕ್ಷ್ಮ ಮತ್ತು ಮ್ಯಾಕ್ರೋನ್ಯೂಟ್ರಿಯೆಂಟ್ಗಳಲ್ಲಿ ಸಮೃದ್ಧವಾಗಿದೆ. ಪ್ರೋಟೀನ್, ವಿಟಮಿನ್ ಸಿ, ಗ್ಯಾಲಿಕ್ ಆಮ್ಲದ ಜೊತೆಗೆ ಉತ್ಕರ್ಷಣ ನಿರೋಧಕ, ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಸಮೃದ್ಧವಾಗಿವೆ.
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಪೇರಳೆ ಎಲೆಗಳನ್ನು ಜಗಿಯುವುದು ಜೀರ್ಣಕ್ರಿಯೆಯನ್ನು ಸುಧಾರಿಸಲು ತುಂಬಾ ಪ್ರಯೋಜನಕಾರಿಯಾಗಿದೆ. ತೂಕ ನಷ್ಟ, ಕಡಿಮೆ ಕೊಲೆಸ್ಟ್ರಾಲ್ ಮಟ್ಟ, ಸಕ್ಕರೆ ನಿಯಂತ್ರಣ ಮತ್ತು ಹೊಳೆಯುವ ತ್ವಚೆಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ . ಪೇರಳೆ ಎಲೆಗಳನ್ನು ಕುದಿಸಿದ ನೀರನ್ನು ಕುಡಿಯುವುದರಿಂದ ಕ್ಯಾಲೋರಿಗಳು ಕರಗುತ್ತವೆ. ಅಲ್ಲದೆ, ಈ ನೀರು ಪೋಷಕಾಂಶಗಳನ್ನು ಹೀರಿಕೊಳ್ಳುತ್ತದೆ, ಇದು ಚಯಾಪಚಯವನ್ನು ಹೆಚ್ಚಿಸುತ್ತದೆ. ಇದು ದೇಹದಲ್ಲಿ ಆಮ್ಲಜನಕದ ಹರಿವನ್ನು ಸುಧಾರಿಸುತ್ತದೆ. ಇದರ ಎಲೆಗಳು ರಕ್ತಹೀನತೆಯನ್ನೂ ನಿವಾರಿಸುತ್ತದೆ.