Ashwaveega News 24×7 ಜನವರಿ 07 – ಮೈಸೂರು : ಬಿಜೆಪಿ ಸಂಸದ ಶಾಸಕರ ಮಧ್ಯೆಗೆ ನಡೆಯುತ್ತಿದ್ದ ಬಹಿರಂಗ ವಾಗ್ಯುದ್ಧ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ. ಗ್ಯಾಸ್ ಪೈಪ್ಲೈನ್ ಹಗ್ಗಜಗ್ಗಾಟ ಮೈಸೂರಿನಲ್ಲಿ ಮುಗಿಯುವ ಲಕ್ಷಣಗಳೇ ಕಾಣುತ್ತಿಲ್ಲ. ಈ ಯೋಜನೆಯನ್ನು ವೈಯಕ್ತಿಕ ಪ್ರತಿಷ್ಠೆಯಾಗಿ ನಾಯಕರು ಸ್ವೀಕರಿಸಿರುವಂತೆ ಗೋಚರವಾಗುತ್ತಿದೆ. ಸಂಸದ ಪ್ರತಾಪ್ ಸಿಂಹ ವಿರುದ್ಧ ಶುಕ್ರವಾರ ಶಾಸಕ ಎಲ್ ನಾಗೇಂದ್ರ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ನಾಗೇಂದ್ರ, ನಾವು, ನಮ್ಮ ಕಾರ್ಯಕರ್ತರು ಹಾಗೂ ಮೈಸೂರು ಮಹಾನಗರ ಪಾಲಿಕೆಯ ಕಾರ್ಪೋರೇಟರ್ಗಳೆಲ್ಲಾ ಓಡಾಡಿ ಪ್ರತಾಪ್ ಸಿಂಹ ಅವರಿಗೆ ಮತ ಹಾಕಿಸಿದ್ದೇವೆ. ಪಕ್ಷದ ಕಾರ್ಯಕರ್ತರು, ಕಾರ್ಪೋರೇಟರ್ಗಳು ಇಲ್ಲದಿದ್ದರೆ ಅವರು ಗೆಲ್ಲೋಕೆ ಆಗುತ್ತಾ? ಎಂದು ಕಿಡಿಕಾರಿದ್ರು .
