Ashwaveega News 24×7 ಮಾರ್ಚ್ 25 – 2026 : ಮೈಸೂರು ಜಿಲ್ಲೆಯನ್ನು ಬೆಚ್ಚಿಬೀಳಿಸಿದ ಹೃದಯವಿದ್ರಾವಕ ಘಟನೆಗೆ ದುರಂತ ಅಂತ್ಯ ಕಂಡಿದೆ. ಪ್ರೇಮ ಪಾಶಕ್ಕೆ ಬಿದ್ದು ಕಳೆದ 12 ವರ್ಷಗಳಿಂದ ಕೋಮಾದಲ್ಲೇ ‘ಜೀವಂತ ಶವ’ದಂತಾಗಿದ್ದ ವೈದ್ಯೆ ಡಾ. ನಾಗಶ್ರೀ ಇಂದು ನಿಧನರಾಗಿದ್ದಾರೆ.
ಆಯುರ್ವೇದ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಡಾ. ನಾಗಶ್ರೀ ಅವರಿಗೆ ಜ್ಯೂನಿಯರ್ ವೈದ್ಯ ಡಾ. ವಿನಯ್ ಕುಮಾರ್ ಪರಿಚಯವಾಗಿತ್ತು. ಪರಿಚಯ ಪ್ರೀತಿಗೆ ತಿರುಗಿ, ಬಳಿಕ ದುರಂತಕ್ಕೆ ಕಾರಣವಾಯಿತು ಎಂಬ ಆರೋಪ ಕೇಳಿಬಂದಿದೆ.
ವಯಸ್ಸಿನಲ್ಲಿ ಹಿರಿಯಳಾದ ನಾಗಶ್ರೀ ಅವರನ್ನು ಮದುವೆಯಾಗಲು ಮನೆ ಒಪ್ಪುವುದಿಲ್ಲ ಎಂದು ನಾಟಕವಾಡಿದ ವಿನಯ್, ಬಳಿಕ ಶ್ರೀರಂಗಪಟ್ಟಣದ ಲಾಡ್ಜ್ಗೆ ಕರೆದುಕೊಂಡು ಹೋಗಿ ಆತ್ಮಹತ್ಯೆ ಯತ್ನದ ನಾಟಕವಾಡಿದ ಎನ್ನಲಾಗಿದೆ. ಈ ವೇಳೆ ನಾಗಶ್ರೀ ಅವರಿಗೆ ಓವರ್ ಡೋಸ್ ಇಂಜೆಕ್ಷನ್ ನೀಡಿ, ತಾನೂ ಆತ್ಮಹತ್ಯೆಗೆ ಯತ್ನಿಸಿದಂತೆ ನಟಿಸಿದ್ದಾನೆ ಎಂಬ ಗಂಭೀರ ಆರೋಪವಿದೆ.
ಈ ಘಟನೆಯ ಪರಿಣಾಮವಾಗಿ ನಾಗಶ್ರೀ ಕೋಮಾಗೆ ಜಾರಿದ್ದು, ಕಳೆದ 12 ವರ್ಷಗಳಿಂದ ಯಾವುದೇ ನೆನಪಿನ ಶಕ್ತಿಯಿಲ್ಲದೆ ಜೀವನ ಸಾಗಿಸುತ್ತಿದ್ದರು. ಕುಟುಂಬದವರು ನಿರಂತರವಾಗಿ ಚಿಕಿತ್ಸೆ ನೀಡುತ್ತಿದ್ದರೂ, ಅವರು ಚೇತರಿಸಿಕೊಳ್ಳಲಿಲ್ಲ.
ಇದೀಗ 12 ವರ್ಷಗಳ ನಂತರ ಅವರ ನಿಧನದಿಂದ ಪ್ರಕರಣ ಮತ್ತೆ ಚರ್ಚೆಗೆ ಬಂದಿದೆ. ಇನ್ನೊಂದೆಡೆ, ವಿನಯ್ ಕುಮಾರ್ ಅವರ ವಿರುದ್ಧ ಅವರ ಪತ್ನಿಯೂ ಕಿರುಕುಳದ ಆರೋಪ ಮಾಡಿದ್ದು, ಅವರ ಕರಾಳ ಮುಖ ಮತ್ತಷ್ಟು ಬಹಿರಂಗವಾಗಿದೆ.
ಪ್ರೀತಿಯ ಹೆಸರಿನಲ್ಲಿ ನಡೆದ ಈ ದುರಂತ, ನಂಬಿಕೆ ದುರುಪಯೋಗದ ಭೀಕರ ಉದಾಹರಣೆಯಾಗಿ ಪರಿಣಮಿಸಿದೆ. ಪ್ರಕರಣದ ಕುರಿತು ಮರುತನಿಖೆ ಆಗಬೇಕೆಂಬ ಒತ್ತಾಯಗಳು ಕೇಳಿಬರುತ್ತಿವೆ.
