
ಕ್ಯಾರೆಟ್ ಆರೋಗ್ಯಕ್ಕೆ ಬಹಳ ಒಳ್ಳೆಯದಗಿದ್ದು, ಅನೇಕ ಭಾರತೀಯ ಭಕ್ಷ್ಯಗಳಲ್ಲಿ ಮತ್ತು ಚೈನೀಸ್ ಭಕ್ಷ್ಯಗಳಲ್ಲಿ ಕ್ಯಾರೆಟ್ ಅನ್ನು ಹೆಚ್ಚಾಗಿ ಬಳಸಲಾಗುತ್ತದೆ. ಅದರಲ್ಲೂ ಸಲಾಡ್ ಅಥವಾ ಹಲ್ವಾ ತಯಾರಿಕೆಗೆ ಕ್ಯಾರೆಂಟ್ ಹೆಚ್ಚಾಗಿ ಬಳಸಲಾಗುತ್ತಿದ್ದು, ಈ ತರಕಾರಿ ನಿರ್ದಿಷ್ಟ ಸೀಸನ್ನಲ್ಲಿ ಮಾತ್ರವಲ್ಲದೇ ವರ್ಷ ವಿಡೀ ಅಂಗಡಿಗಳಲ್ಲಿ ಲಭ್ಯವಿದೆ. ನಿಮ್ಮ ದೈನಂದಿನ ಆಹಾರದಲ್ಲಿ ಹೆಚ್ಚಿನ ತರಕಾರಿಗಳನ್ನು ಸೇರಿಸಿದರೆ, ನಿಮ್ಮ ದೇಹವು ಆರೋಗ್ಯಕರವಾಗಿರುತ್ತದೆ.
ಅದೂ ಕೂಡ ಹಸಿ ತರಕಾರಿಗಳನ್ನು ಕುದಿಸುವ ಬದಲು ಆಗೆ ತಿಂದರೆ ಅದರಲ್ಲಿರುವ ಪೋಷಕಾಂಶಗಳು ದೇಹಕ್ಕೆ ಪೂರ್ಣ ಪ್ರಮಾಣದಲ್ಲಿ ದೊರೆಯುತ್ತದೆ. ಮತ್ತು ಹಸಿಯಾಗಿ ತಿನ್ನಬಹುದಾದ ಎಲ್ಲಾ ತರಕಾರಿಗಳು ರುಚಿಕರವಾಗಿದ್ದು, ಅಂತಹ ತರಕಾರಿಗಳಲ್ಲಿ ಕ್ಯಾರೆಟ್ ಕೂಡ ಒಂದು. ಪ್ರತಿದಿನ ಒಂದು ಕ್ಯಾರೆಟ್ ತಿನ್ನುವುದರಿಂದ ಆಗುವ ಲಾಭಗಳೇನು ಗೊತ್ತಾ? ದಿನಕ್ಕೊಂದು ಕ್ಯಾರೆಟ್ ತಿನ್ನಲೇಬೇಕಂತೆ ಕಾರಣವೇನು ಗೊತ್ತಾ? ಆಗಿದ್ದರೆ ಈ ಸ್ಟೋರಿ ನೋಡಿ ?
ದೇಹದಲ್ಲಿ ಯಾವುದೇ ಸಮಸ್ಯೆಗಳಿಲ್ಲದಂತೆ ಆರೋಗ್ಯಕರವಾಗಿ ಬದುಕುವುದು ಬಹಳ ಸವಾಲಿನ ವಿಚಾರವಾಗಿದ್ದು, ಆದರೆ ಸಾಧ್ಯವಾದಷ್ಟು ಪ್ರತಿಯೊಬ್ಬರೂ ತಮ್ಮ ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳುವತ್ತೆ ಹೆಚ್ಚು ಗಮನ ಹರಿಸಬೇಕು. ನಮ್ಮ ದೇಹವನ್ನು ಆರೋಗ್ಯವಾಗಿಡಲು ಸಾಕಷ್ಟು ಪೋಷಕಾಂಶಗಳನ್ನು ಹೊಂದಿರುವ ಆಹಾರವನ್ನು ನಿಯಮಿತವಾಗಿ ಸೇವಿಸುವುದರಿಂದ ನಮ್ಮ ದೇಹವನ್ನು ಆರೋಗ್ಯರವಾಗಿಟ್ಟುಕೊಳ್ಳಲು ಸಹಾಯಕವಾಗಿದೆ. ಅದರಲ್ಲೂ ಕ್ಯಾರೆಟ್ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅನೇಕ ಭಾರತೀಯ ಭಕ್ಷ್ಯಗಳಲ್ಲಿ ಮತ್ತು ಚೈನೀಸ್ ಭಕ್ಷ್ಯಗಳಲ್ಲಿ ಕ್ಯಾರೆಟ್ ಅನ್ನು ಹೆಚ್ಚಾಗಿ ಬಳಸಲಾಗುತ್ತದೆ. ಅದರಲ್ಲೂ ಸಲಾಡ್ ಅಥವಾ ಹಲ್ವಾ ತಯಾರಿಕೆಗೆ ಕ್ಯಾರೆಂಟ್ ಹೆಚ್ಚಾಗಿ ಬಳಸಲಾಗುತ್ತದೆ. ಈ ತರಕಾರಿ ನಿರ್ದಿಷ್ಟ ಸೀಸನ್ನಲ್ಲಿ ಮಾತ್ರವಲ್ಲದೇ ವರ್ಷವಿಡೀ ಸಿಗುವ ತರಕಾರಿಯಾಗಿದೆ .
ಆರೋಗ್ಯವಾಗಿರಬೇಕೆಂದರೆ ನಮ್ಮ ಆಹಾರ ಕೂಡ ಬಹಳ ಮುಖ್ಯವಾಗಿರುತ್ತದೆ. ಆರೋಗ್ಯವೇ ಮಹಾಭಾಗ್ಯ ಎನ್ನುತ್ತಾರೆ ಹಿರಿಯರು. ದೇಹದಲ್ಲಿ ಯಾವುದೇ ಸಮಸ್ಯೆಗಳಿಲ್ಲದವರು ಅದೃಷ್ಟವಂತರು ಅಂತ ಹೇಳುತ್ತಾರೆ. ಅದರಲ್ಲೂ ಇತ್ತೀಚೆಗಂತೂ ಹೆಚ್ಚಿನವರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ. ನಾವು ಆರೋಗ್ಯವಾಗಿರಬೇಕಾದರೆ ಮೊದಲು ನಾವು ಏನು ತಿನ್ನುತ್ತೇವೆ ಎಂಬುದರ ಬಗ್ಗೆ ಗಮನ ಹರಿಸಬೇಕು. ಅದಕ್ಕಾಗಿ ನಮ್ಮ ಆಹಾರ ಕೂಡ ಬಹಳ ಮುಖ್ಯವಾಗಿರುತ್ತದೆ. ನಮ್ಮ ದೇಹವನ್ನು ಆರೋಗ್ಯಕರವಾಗಿಡಲು ನಾವು ಸಾಕಷ್ಟು ಪೋಷಕಾಂಶಗಳನ್ನು ಹೊಂದಿರುವ ಉತ್ತಮ ಆಹಾರವನ್ನು ನಿಯಮಿತವಾಗಿ ತಿನ್ನಬೇಕು.
ಕ್ಯಾರೆಟ್ ನಮ್ಮ ಭಾರತೀಯ ಪಾಕಪದ್ಧತಿ, ಚೈನೀಸ್ ಭಕ್ಷ್ಯಗಳು, ಸಲಾಡ್ ಅಥವಾ ಹಲ್ವಾದಲ್ಲಿ ಹೆಚ್ಚು ಬಳಸುವ ತರಕಾರಿಯಾಗಿದೆ. ಕ್ಯಾರೆಟ್ ನಮಗೆ ವರ್ಷವಿಡೀ ಲಭ್ಯವಿರುವ ತರಕಾರಿ ಮತ್ತು ತುಂಬಾನೇ ಆರೋಗ್ಯಕರವಾಗಿದೆ. ಕ್ಯಾನ್ಸರ್ ತಡೆಗಟ್ಟುವಲ್ಲಿ ಕ್ಯಾರೆಟ್ ಪ್ರಮುಖ ಪಾತ್ರ ವಹಿಸುತ್ತದೆ ಅಂತೆ. ನಮ್ಮ ಕಣ್ಣುಗಳನ್ನು ಆರೋಗ್ಯವಾಗಿಡುವಲ್ಲಿ ಕ್ಯಾರೆಟ್ ಪ್ರಮುಖ ಪಾತ್ರ ವಹಿಸುತ್ತದೆ. ಇದು ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಪ್ರಮುಖ ಖನಿಜಗಳಲ್ಲಿ ಸಮೃದ್ಧವಾಗಿದೆ. ಹಾಗಾಗಿ ಇದನ್ನು ನಿತ್ಯವೂ ಆಹಾರದಲ್ಲಿ ಸೇರಿಸಿಕೊಂಡರೆ ಕಣ್ಣುಗಳನ್ನು ಆರೋಗ್ಯವಾಗಿಟ್ಟುಕೊಳ್ಳುವಂತಹ ಹಲವಾರು ಪ್ರಯೋಜನಗಳನ್ನು ಪಡೆಯುತ್ತೇವೆ .
ಅದೇ ರೀತಿ ಕ್ಯಾರೆಟ್ ನಲ್ಲಿ ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಬಿ6 ಹೇರಳವಾಗಿದೆ. ಕ್ಯಾರೆಟ್ ಸಹ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕ್ಯಾರೆಟ್ನಲ್ಲಿರುವ ವಿಟಮಿನ್ ಸಿ ನಮ್ಮ ಒಸಡುಗಳು, ಹಲ್ಲುಗಳು ಮತ್ತು ಚರ್ಮವನ್ನು ಆರೋಗ್ಯವಾಗಿರಿಸುತ್ತದೆ. ಕ್ಯಾರೆಟ್ ದೇಹವು ಕಾಲಜನ್ ಅನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಕ್ಯಾರೆಟ್ನಲ್ಲಿ ಹೆಚ್ಚಿನ ಕಾಲಜನ್ ಇದ್ದರೆ, ಮಾತ್ರ ನಮ್ಮ ಚರ್ಮವು ಆರೋಗ್ಯಕರವಾಗಿರುತ್ತದೆ. ಹಾಗಾಗಿ ಸೂರ್ಯನ ನೇರಳಾತೀತ ಕಿರಣಗಳಿಂದ ಚರ್ಮದ ಕೋಶಗಳನ್ನು ರಕ್ಷಿಸಲು ಕ್ಯಾರೆಟ್ ಸಹಾಯ ಮಾಡುತ್ತದೆ. ಹಾಗಾಗಿ ಹಲವಾರು ಪ್ರಯೋಜನಗಳನ್ನು ನೀಡುವ ಕ್ಯಾರೆಟ್ ಅನ್ನು ಪ್ರತಿದಿನ ಒಂದು ತಿಂದರೆ ಕಣ್ಣಿನ ದೃಷ್ಟಿ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರವಾಗುತ್ತವೆ.