Ashwaveega News 24×7 ಜನವರಿ 18 -Dolly vs Raj B Shetty– ಚಿತ್ರರಂಗದಲ್ಲಿ ಬಡವರ ಮಕ್ಕಳಿಗೆ ಅವಕಾಶ ನೀಡುವ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ನಟ ರಾಜ್ ಬಿ. ಶೆಟ್ಟಿ ಅವರ ಹೇಳಿಕೆಗೆ ಸಂಬಂಧಿಸಿದಂತೆ ಉಂಟಾದ ಚರ್ಚೆಗೆ ನಟ ಧನಂಜಯ್ ಸ್ಪಷ್ಟನೆ ನೀಡಿದ್ದಾರೆ.
“ಟ್ಯಾಲೆಂಟ್ ಇರುವವರಿಗೆ ಅವಕಾಶ ಸಿಗಬೇಕು ಎಂಬುದೇ ನನ್ನ ನಿಲುವು. ಬಡವರ ಮಕ್ಕಳು ಬೆಳೀಬೇಕು ಅನ್ನೋದು ದೊಡ್ಡ ಆಶಯ,” ಎಂದು ಡಾಲಿ ಹೇಳಿದ್ದಾರೆ. ಈ ವಿಚಾರವನ್ನು ನಾನು ಪದೇ ಪದೇ, ಬಹಳ ಬಾರಿ ಎಕ್ಸ್ಪ್ರೆಸ್ ಮಾಡಿದ್ದೇನೆ. ಮತ್ತೆ ಮತ್ತೆ ಅದನ್ನೇ ಎಕ್ಸ್ಪ್ಲೇನ್ ಮಾಡ್ಬೇಕಾಗ್ತಿರೋದು ದುರಂತ ಅಂತಾ ಡಾಲಿ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ ಬಿ. ಶೆಟ್ಟಿ ಅವರ ಹೇಳಿಕೆ ಬಗ್ಗೆ ನಡೆಯುತ್ತಿರುವ ಚರ್ಚೆ ಒಳ್ಳೆಯದೇ ಎಂದು ಹೇಳಿದ ಧನಂಜಯ್, “ಈ ಮಾತಿಗೆ ಬಹಳ ವಿಶಾಲವಾದ ಅರ್ಥವಿದೆ. ಇಲ್ಲದೇ ಇರೋರಿಗೆ ಒಂದಿಷ್ಟು ವ್ಯವಸ್ಥೆ ಕೊಡಬೇಕು ಅನ್ನೋದಷ್ಟೇ ಅರ್ಥ. ಇದಕ್ಕಿಂತ ಸಿಂಪಲ್ ಆಗಿ ಹೇಳೋಕೆ ಆಗೋದಿಲ್ಲ,” ಎಂದು ಸ್ಪಷ್ಟಪಡಿಸಿದರು.
ಬಡತನ ಅಡ್ಡಿಯಾಗಬಾರದು, ಪ್ರತಿಭೆ ಇದ್ದವರಿಗೆ ಅವಕಾಶ ಸಿಗಬೇಕು ಅನ್ನೋದು ನನ್ನ ಉದ್ದೇಶ. ಬಡವರ ಮಕ್ಕಳು ಬೆಳೀಬೇಕು ಅನ್ನೋದೇ ‘ಅವಕಾಶ ಕೊಡಿ’ ಅನ್ನೋ ಮಾತಿನ ಅರ್ಥ ಎಂದು ಡಾಲಿ ಹೇಳಿದ್ದಾರೆ.
.
