ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಿರ, ಈ ಸಮಸ್ಯೆಯನ್ನು ಬಗೆಹರಿಸಲು ಇಲ್ಲಿದೆ ನೋಡಿ ಸುಲಭ ಪರಿಹಾರ ಅದು ಏನೆಂದು ತಿಳಿಯ ಬೇಕಾದರೆ ಈ ಕೆಳಗಿನ ಸುದ್ದಿ ಓದಿ..
ಸೂರ್ಯಕಾಂತಿ ಬೀಜಗಳಲ್ಲಿ ಸಮೃದ್ಧ ಪ್ರಮಾಣದ ಅತಿ ಹೆಚ್ಚು ಗುಣಮಟ್ಟದ ಪೌಷ್ಟಿಕ ಸತ್ವಗಳು ಅಡಗಿದ್ದು, ಇದರ ಕಾರಣದಿಂದ ಸೂರ್ಯಕಾಂತಿ ಬೀಜಗಳು ನಮ್ಮನ್ನು ಹಲವಾರು ದೀರ್ಘಕಾಲದ ಕಾಯಿಲೆಗಳಿಂದ ಪಾರು ಮಾಡುತ್ತದೆ. ಅಷ್ಟೆ ಅಲ್ಲಾದೆ ಸೂರ್ಯಕಾಂತಿ ಬೀಜಗಳು ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ಆರೋಗ್ಯಕರ ಕೊಬ್ಬಿನ ಅಂಶಗಳನ್ನು ಒಳಗೊಂಡಿರುವುದರ ಸಹಿತ ದೇಹಕ್ಕೆ ಅಗತ್ಯವಾಗಿ ಬೇಕಾದ ವಿಟಮಿನ್ ಅಂಶಗಳು ಮತ್ತು ಖನಿಜಾಂಶಗಳನ್ನು ಹೊಂದಿದ್ದು, ಇದರ ಕಾರಣದಿಂದ ನಮಗೆ ಹೃದಯದ ಸಮಸ್ಯೆ, ಮಧುಮೇಹ ಮತ್ತು ಉರಿಯೂತ ಕಂಡುಬರುವುದಿಲ್ಲ.
ಈ ಹೂವಿನ ಬೀಜವನ್ನು ಸೇವಿಸುವುದರಿಂದ ಆಗುವ ಪ್ರಯೋಜನಗಳು :
- ಸೂರ್ಯಕಾಂತಿ ಬೀಜಗಳು ನೋಡಲು ಸಣ್ಣದಾಗಿ ಕಾಣುತ್ತವೆ ಆದರೆ ಅತಿ ಹೆಚ್ಚು ಪೌಷ್ಟಿಕಾಂಶಗಳನ್ನು ನಾವು ಇವುಗಳಲ್ಲಿ ನಿರೀಕ್ಷೆ ಮಾಡಬಹುದು. ನಮ್ಮ ದೇಹದ ವಿವಿಧ ಕಾರ್ಯ ಚಟುವಟಿಕೆಗಳಿಗೆ ಸೂರ್ಯಕಾಂತಿ ಬೀಜಗಳು ಪ್ರಯೋಜನಕ್ಕೆ ಬರಲಿವೆ.
- ಸೂರ್ಯಕಾಂತಿ ಬೀಜಗಳಲ್ಲಿ ವಿಟಮಿನ್ ಈ ಅಂಶ, ಜಿಂಕ್ ಮತ್ತು ಸೆಲೆನಿಯಂ ಅಂಶ ಹೆಚ್ಚಾಗಿ ಕಂಡುಬರುತ್ತದೆ. ಇದರ ಕಾರಣದಿಂದ ನಮ್ಮ ದೇಹದ ಜೀವಕೋಶಗಳು ಫ್ರೀ ರಾಡಿಕಲ್ ಗಳ ಹಾನಿಯಿಂದ ರಕ್ಷಿಸಲ್ಪಡುತ್ತವೆ.
- ದೀರ್ಘಕಾಲದಲ್ಲಿ ಯಾವುದೇ ಕಾಯಿಲೆಗಳು ಕಂಡು ಬರದಂತೆ ತಡೆದು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತವೆ. ಇದರ ಜೊತೆಗೆ ಫಿನಾಲಿಕ್ ಆಮ್ಲಗಳು ಮತ್ತು ಫ್ಲೇವನಾಯ್ಡ್ ಅಂಶಗಳ ಪ್ರಭಾವ ಕೂಡ ದುಪ್ಪಟ್ಟಾಗಿ ಇರುತ್ತದೆ ಎಂದು ಹೇಳಬಹುದು.
- ಸೂರ್ಯಕಾಂತಿ ಬೀಜಗಳು ನಮ್ಮ ದೇಹದಲ್ಲಿ ಆಗಾಗ ಕಂಡುಬರುವ ಉರಿಯೂತದ ಸಮಸ್ಯೆಯನ್ನು ದೂರ ಮಾಡಿ ಬಹುತೇಕ ದೀರ್ಘಕಾಲದ ಕಾಯಿಲೆಗಳು ಎಂದು ಗುರುತಿಸಿಕೊಂಡ ಹೃದಯದ ಸಮಸ್ಯೆ, ಮಧುಮೇಹ ಇತ್ಯಾದಿ ಸಮಸ್ಯೆಗಳನ್ನು ಬಗೆಹರಿಸುತ್ತದೆ.
- ಬಹು ಮುಖ್ಯವಾಗಿ ದೇಹದಲ್ಲಿ ಸಿ ರಿಆಕ್ಟಿವ್ ಪ್ರೋಟೀನ್ ಅಂಶ ಕಡಿಮೆಯಾಗಿ ದೇಹದಲ್ಲಿ ಯಾವುದೇ ಆರೋಗ್ಯ ಸಮಸ್ಯೆಗಳು ಕಂಡು ಬರದಂತೆ ನೋಡಿಕೊಳ್ಳುತ್ತದೆ. ವಿಟಮಿನ್ ಈ ಅಂಶ ಹೆಚ್ಚಾಗಿರುವ ಕಾರಣ ನಮ್ಮ ದೇಹದ ಆರೋಗ್ಯಕ್ಕೆ ಸೂರ್ಯಕಾಂತಿ ಬೀಜಗಳ ಉತ್ಪನ್ನಗಳು ಹೆಚ್ಚು ಅವಶ್ಯಕ ಎಂದು ಹೇಳಬಹುದು.
- ಸೂರ್ಯಕಾಂತಿ ಬೀಜಗಳಲ್ಲಿ ದೇಹದ ರಕ್ತನಾಳಗಳನ್ನು ಹಿಗ್ಗಿಸುವ ಗುಣಲಕ್ಷಣಗಳು ಕಂಡುಬರುತ್ತವೆ. ಇದು ದೇಹದ ರಕ್ತನಾಳಗಳಲ್ಲಿ ಅತಿ ಹೆಚ್ಚು ಒತ್ತಡ ಉಂಟಾಗುವುದನ್ನು ತಪ್ಪಿಸುತ್ತದೆ.
- ಇದರಿಂದ ಯಾವುದೇ ಸಮಯದಲ್ಲಿ ಪಾರ್ಶ್ವವಾಯು ಸಮಸ್ಯೆ ಎದುರಾಗುವುದು ತಪ್ಪುತ್ತದೆ. ನೋಡಲು ಅತ್ಯಂತ ಚಿಕ್ಕದಾಗಿ ಕಾಣುವ ಸೂರ್ಯಕಾಂತಿ ಬೀಜಗಳಲ್ಲಿ ಮೆಗ್ನಿಸಿಯಮ್ ಅಂಶ ಸ್ವಲ್ಪ ಹೆಚ್ಚಾಗಿದ್ದು, ಹೃದಯದ ಅಪಧಮನಿಗಳ ಮೇಲೆ ಉಂಟಾಗುವ ಒತ್ತಡವನ್ನು ಕಡಿಮೆ ಮಾಡಿ ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ದೂರಮಾಡುತ್ತದೆ.
ಇದನ್ನೂ ಓದಿ : https://ashwaveega.com/non-bailable-warrant-issued-to-mla-yatnal/