Ashwaveega News 24×7 ಜನವರಿ 20 – ಬೆಂಗಳೂರು/ತಿರುವನಂತಪುರ/ಬಳ್ಳಾರಿ : ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದ್ದು, Enforcement Directorate (ED) ಅಧಿಕಾರಿಗಳು ಏಕಕಾಲದಲ್ಲಿ ಹಲವು ಕಡೆ ದಾಳಿ ನಡೆಸಿದ್ದಾರೆ. ಅಯ್ಯಪ್ಪಸ್ವಾಮಿಗೆ ಸಂಬಂಧಿಸಿದ ಚಿನ್ನ ಕಳವು ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ …
ಬೆಂಗಳೂರು ಸೇರಿದಂತೆ ಬಳ್ಳಾರಿ ಹಾಗೂ ತಿರುವನಂತಪುರದಲ್ಲಿ ED ಅಧಿಕಾರಿಗಳು ರೇಡ್ ನಡೆಸಿದ್ದು, ಬಳ್ಳಾರಿ ನಗರದ ರೊದ್ದಂ ಜ್ಯುವೆಲ್ಲರಿ ಶಾಪ್ನಲ್ಲಿ ಸರ್ಚ್ ನಡೆಸಲಾಗಿದೆ. ಗೋವರ್ಧನ್ ಒಡೆತನದ ರೊದ್ದಂ ಜ್ಯುವೆಲ್ಲರಿ ಶಾಪ್ ಮೇಲೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದೇ ವೇಳೆ ಬೆಂಗಳೂರಿನ ಶ್ರೀರಾಮಪುರದಲ್ಲಿರುವ ಅಯ್ಯಪ್ಪ ದೇವಸ್ಥಾನ ಹಾಗೂ ದೇವಸ್ಥಾನದ ಟ್ರಸ್ಟಿಯ ಮನೆ ಮೇಲೂ ದಾಳಿ ನಡೆದಿದ್ದು, ದಾಖಲೆಗಳನ್ನು ED ಅಧಿಕಾರಿಗಳು ಪರಿಶೀಲಿಸಿದ್ದಾರೆ. ಬೆಂಗಳೂರು ಮೂಲದ ಉದ್ಯಮಿ ಉನ್ನಿಕೃಷ್ಣನ್ ಪೊಟ್ಟಿ ಅವರಿಗೂ ಈ ಪ್ರಕರಣದ ನಂಟು ಇದೆ ಎಂಬ ಶಂಕೆಯ ಮೇರೆಗೆ ಪರಿಶೀಲನೆ ಮುಂದುವರಿದಿದೆ ಎನ್ನಲಾಗಿದೆ.
ಶಬರಿಮಲೆ ದೇಗುಲದ ದ್ವಾರಪಾಲಕರ ಪ್ರತಿಮೆಗೆ ಲೇಪಿಸಲಾಗಿದ್ದ ಚಿನ್ನ 2019ರಲ್ಲಿ ನಾಪತ್ತೆಯಾಗಿತ್ತು. ಒಟ್ಟು ಸುಮಾರು 4.5 ಕೆಜಿ ಚಿನ್ನದ ಲೇಪನ ಮಾಯವಾಗಿರುವುದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ಪ್ರಕರಣದಲ್ಲಿ ಹಣಕಾಸು ಅಕ್ರಮ ಹಾಗೂ ಚಿನ್ನ ದುರುಪಯೋಗದ ಶಂಕೆ ಹಿನ್ನೆಲೆಯಲ್ಲಿ ಇದೀಗ ED ತನಿಖೆ ಚುರುಕುಗೊಂಡಿದೆ.
ವಿವಿಧ ಸ್ಥಳಗಳಲ್ಲಿ ವಶಪಡಿಸಿಕೊಳ್ಳಲಾದ ದಾಖಲೆಗಳು ಹಾಗೂ ಹಣಕಾಸು ವ್ಯವಹಾರಗಳ ಪರಿಶೀಲನೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಹತ್ವದ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
