Ashwaveega News 24×7 ಮಾರ್ಚ್ 18– 2026 : ಮೊಟ್ಟೆ ಖರೀದಿಸುವ ಗ್ರಾಹಕರಿಗೆ ಮಹತ್ವದ ಸುದ್ದಿ. ಇನ್ಮುಂದೆ ಕೋಳಿ ಮೊಟ್ಟೆಗಳ ಮೇಲೆಯೇ ಎಕ್ಸ್ಪೈರಿ ಡೇಟ್ ಸೀಲ್ ಹಾಕುವುದು ಕಡ್ಡಾಯವಾಗಲಿದೆ. ಹಳೆಯ ಮತ್ತು ತಾಜಾ ಮೊಟ್ಟೆಗಳನ್ನು ಸುಲಭವಾಗಿ ಗುರುತಿಸಲು ಈ ಹೊಸ ನಿಯಮ ಜಾರಿಗೆ ತರಲಾಗುತ್ತಿದೆ.
ಫುಡ್ ಪ್ರಾಡಕ್ಟ್ಗಳಂತೆ, ಮೊಟ್ಟೆಯ ಮೇಲೆಯೇ ಅದು ಇಡಲಾದ ದಿನಾಂಕ ಹಾಗೂ ಯಾವ ದಿನದೊಳಗೆ ಉಪಯೋಗಿಸಬೇಕು ಎಂಬ ಮಾಹಿತಿ ಸ್ಪಷ್ಟವಾಗಿ ಮುದ್ರಿಸಲಾಗುತ್ತದೆ . ಇದರಿಂದ ಗ್ರಾಹಕರು ಸುರಕ್ಷಿತವಾಗಿ ಆಹಾರ ಆಯ್ಕೆಮಾಡಲು ಸಹಾಯಕವಾಗಲಿದೆ .
ಈ ಹೊಸ ನಿಯಮವನ್ನು ಏಪ್ರಿಲ್ 1ರಿಂದ ಜಾರಿಗೆ ತರಲಾಗುತ್ತಿದ್ದು , ಪ್ರಸ್ತುತ ಉತ್ತರ ಪ್ರದೇಶದಲ್ಲಷ್ಟೇ ಈ ನಿಯಮ ಅನ್ವಯವಾಗಲಿದೆ . ರಾಜ್ಯ ಸರ್ಕಾರದ ಈ ಕ್ರಮಕ್ಕೆ ಯೋಗಿ ಆದಿತ್ಯನಾಥ್ ಅವರು ಸೂಚನೆ ನೀಡಿದ್ದಾರೆ .
ಹಳೆಯ ಅಥವಾ ಅವಧಿ ಮೀರಿದ ಮೊಟ್ಟೆಗಳನ್ನು ಜನರು ಸೇವಿಸದಂತೆ ಮುನ್ನೆಚ್ಚರಿಕೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಆಹಾರ ಸುರಕ್ಷತೆ ಮತ್ತು ಗ್ರಾಹಕರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ . ಮುಂದಿನ ದಿನಗಳಲ್ಲಿ ಇತರ ರಾಜ್ಯಗಳಲ್ಲಿಯೂ ಇದೇ ರೀತಿಯ ನಿಯಮ ಜಾರಿಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ .
