Ashwaveega News 24×7 ಜನವರಿ 25 : ಬಿಗ್ಬಾಸ್ ಮನೆ ಒಳಗಿರುವ ಸ್ಪರ್ಧಿ ಗಿಲ್ಲಿಗೆ ದರ್ಶನ್ ಅಭಿಮಾನಿಯಿಂದ ಭಾವನಾತ್ಮಕ ಮನವಿ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. “ಗಿಲ್ಲಿ, ಇದು ನನ್ನ ರಿಕ್ವೆಸ್ಟ್. ದಯವಿಟ್ಟು ಈಡೇರಿಸು” ಎಂದು ಅಭಿಮಾನಿಯೊಬ್ಬರು ಪರಿಪರಿಯಾಗಿ ಮನವಿ ಮಾಡಿದ್ದಾರೆ.
ನಟ ದರ್ಶನ್ ಅವರನ್ನು ಭೇಟಿಯಾಗಬೇಕು ಎಂದು ಗಿಲ್ಲಿಗೆ ಅಭಿಮಾನಿ ವಿಶೇಷವಾಗಿ ಮನವಿ ಮಾಡಿದ್ದಾರೆ. “ನಿನಗೆ ಡೆವಿಲ್ ಸಿನಿಮಾದಲ್ಲಿ ಅವಕಾಶ ಕೊಟ್ಟು ನಿನ್ನ ಲೆವೆಲ್ನೇ ಚೇಂಜ್ ಆಗೋ ಹಾಗೆ ಮಾಡಿದ್ದಾರೆ. ಇವತ್ತು ಅವರು ಕಷ್ಟದಲ್ಲಿದ್ದಾರೆ” ಎಂದು ಅಭಿಮಾನಿ ಹೇಳಿಕೊಂಡಿದ್ದಾರೆ.
ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ದರ್ಶನ್ ಅವರು ಸಂಕಷ್ಟದಲ್ಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದು, “ಹೆಣ್ಮಕ್ಕಳ ಮಾನ ಕಾಪಾಡಲು ಹೋಗಿ ಹೀಗೆ ಆಗಿದೆ, ಶತ್ರುಗಳೆಲ್ಲಾ ಒಟ್ಟಿಗೆ ಸೇರಿ ಹೀಗೆ ಮಾಡಿದ್ದಾರೆ” ಎಂಬುದು ಅಭಿಮಾನಿಯ ಅಭಿಪ್ರಾಯವಾಗಿದೆ. ಇದೇ ವೇಳೆ, “ದರ್ಶನ್ ಅಭಿಮಾನಿಗಳು ನಿನಗೆ ಪ್ರಚಾರ ಮಾಡಿದ್ದಾರೆ. ನೀನು ಗೆಲ್ಲಲೇಬೇಕು ಅಂತಾ ವೋಟ್ ಹಾಕಿದ್ದೇವೆ. ಫಸ್ಟ್ ಹೋಗಿ ದರ್ಶನ್ ಅವರನ್ನ ಮಾತನಾಡಿಸು” ಎಂದು ಗಿಲ್ಲಿಗೆ ಮನವಿ ಮಾಡಿದ್ದಾರೆ.
“ಡಿ ಬಾಸ್ ಅವರು ನಿನಗೆ ಆಶೀರ್ವಾದ ಮಾಡಿದ್ದಾರೆ. ಪ್ಲೀಸ್… ದಯವಿಟ್ಟು ಹೋಗಿ ದರ್ಶನ್ ಅವರನ್ನು ಮಾತನಾಡಿಸು. ಇದು ನನ್ನ ರಿಕ್ವೆಸ್ಟ್” ಎಂದು ಹೇಳಿ, “ಜೈ ಡಿ ಬಾಸ್… ಜೈ ಗಿಲ್ಲಿ” ಎಂಬ ಘೋಷಣೆಯೊಂದಿಗೆ ಅಭಿಮಾನಿ ತನ್ನ ಮನವಿಯನ್ನು ಮುಕ್ತಾಯಗೊಳಿಸಿದ್ದಾರೆ. ಈ ಮನವಿಗೆ ಗಿಲ್ಲಿ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ? ಬಿಗ್ಬಾಸ್ ವೇದಿಕೆಯಲ್ಲಿ ಇದು ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದು ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
