Ashwaveega News 24×7 ಫೆಬ್ರವರಿ 08 -2026 – ತುಮಕೂರು : ಮೊದಲ ಪತ್ನಿಗೆ ವಿಚ್ಛೇದನ ನೀಡದೇ ಎರಡನೇ ಮದುವೆಗೆ ಮುಂದಾಗಿದ್ದ ವ್ಯಕ್ತಿಯೊಬ್ಬ ತಾಳಿ ಕಟ್ಟುವ ಕ್ಷಣದಲ್ಲೇ ಸಿಕ್ಕಿಬಿದ್ದ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ನ SLN ಕನ್ವೆನ್ಷನ್ ಹಾಲ್ನಲ್ಲಿ ನಡೆದಿದೆ.
ಬೆಂಗಳೂರು ಮೂಲದ ಹರಿಪ್ರಸಾದ್ (ಹರೀಶ್) ಎಂಬ ವ್ಯಕ್ತಿ ಎರಡನೇ ಮದುವೆಗೆ ಸಿದ್ಧವಾಗಿದ್ದ. ಆದರೆ, ಈ ವಿಚಾರ ತಿಳಿದ ಮೊದಲ ಪತ್ನಿ ಲೇಪಾಕ್ಷಿ, ಪೊಲೀಸರೊಂದಿಗೆ ಕಲ್ಯಾಣ ಮಂಟಪಕ್ಕೆ ನುಗ್ಗಿ ಮದುವೆಯನ್ನು ನಿಲ್ಲಿಸಿದ್ದಾರೆ. ಇದರಿಂದ ಕೆಲಕಾಲ ಕಲ್ಯಾಣ ಮಂಟಪದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಪೊಲೀಸ್ ಮಾಹಿತಿ ಪ್ರಕಾರ, 2014ರಲ್ಲಿ ಹರಿಪ್ರಸಾದ್ ಮತ್ತು ಲೇಪಾಕ್ಷಿ ವಿವಾಹವಾಗಿದ್ದು, ಬಳಿಕ ಕೌಟುಂಬಿಕ ಕಲಹಗಳಿಂದ ದಂಪತಿ ಬೇರ್ಪಟ್ಟಿದ್ದರು . ಆದರೆ, ಕಾನೂನು ಬದ್ಧವಾಗಿ ವಿಚ್ಛೇದನವಾಗಿರಲಿಲ್ಲ. ಈ ನಡುವೆಯೇ ಹರಿಪ್ರಸಾದ್ ಎರಡನೇ ಮದುವೆಗೆ ಮುಂದಾಗಿದ್ದಾನೆ .
ಘಟನೆಯ ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಮದುವೆಯನ್ನು ನಿಲ್ಲಿಸಿ, ವರ ಹಾಗೂ ಕುಟುಂಬಸ್ಥರನ್ನು ಅಮೃತೂರು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಈ ಪ್ರಕರಣ ಸಂಬಂಧ ಕಾನೂನು ಕ್ರಮ ಜರುಗಿಸಲಾಗುತ್ತಿದ್ದು, ವಿಚಾರಣೆ ಮುಂದುವರಿದಿದೆ.
