ಇಂದಿನಿಂದ ಮೂರು ದಿನಗಳ ಕಾಲ ಕಬ್ಬನ್ ಪಾರ್ಕ್ನ ಬಾಲ ಭವನದಲ್ಲಿ ಪುಷ್ಪ ಪ್ರದರ್ಶನ ನಡೆಯಲಿದೆ. ತೋಟಗಾರಿಕೆ ಹಾಗೂ ಮಹಿಳಾ ಮತ್ತು ಮಕ್ಕಳಾಭಿವೃದ್ಧಿ ಇಲಾಖೆಯ ನೇತೃತ್ವದಲ್ಲಿ ಪ್ರದರ್ಶನ ನಡೆಯುತ್ತಿದ್ದು, ಪುಷ್ಪ ಪ್ರದರ್ಶನಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಚಾಲನೆ ನೀಡಿದರು.
ಪ್ರದರ್ಶನದಲ್ಲಿ ವಿವಿಧ ಕಲಾಕೃತಿಗಳು ಕಣ್ಮನ ಸೆಳೆಯುತ್ತಿದ್ದು, ಡೈನಾಸಾರಸ್. ಜೇನು ಹೇಳು. ಅನಭೆ. ರಾಕೆಟ್. ಕರ್ನಾಟಕ ನಕ್ಷೆ ಸೇರಿ ಹಲವು ಕಲಾಕೃತಿಗಳು ಪುಷ್ಪ ಪ್ರದರ್ಶನದಲ್ಲಿ ಲಭ್ಯವಿದೆ. ಪುಷ್ಪ ಪ್ರದರ್ಶನಕ್ಕೆ ಹತ್ತಾರು ಶಾಲಾ ಮಕ್ಕಳು ಭಾಗಿಯಾಗಲಿದ್ದಾರೆ.