Ashwaveega News 24×7 ಜನವರಿ 25 – ಬಿಗ್ಬಾಸ್ ವೇದಿಕೆ ಗಿಲ್ಲಿ ನಟನ ಬದುಕನ್ನೇ ಬದಲಿಸಿದೆ ಎನ್ನುವುದು ಈಗ ಅಕ್ಷರಶಃ ಸಾಬೀತಾಗಿದೆ. ಬಿಗ್ಬಾಸ್ ಮನೆಗೆ ಪ್ರವೇಶಿಸುವಾಗ ಕೇವಲ 1 ಲಕ್ಷ ಇನ್ಸ್ಟಾಗ್ರಾಂ ಫಾಲೋವರ್ಸ್ ಹೊಂದಿದ್ದ ಗಿಲ್ಲಿ, ಇದೀಗ 2 ಮಿಲಿಯನ್ ಹಿಂಬಾಲಕರನ್ನು ಸಂಪಾದಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
“10 ಲಕ್ಷ ಫಾಲೋವರ್ಸ್ ಬಂದರೆ ಸಾಕು” ಎಂದು ಸ್ವತಃ ಗಿಲ್ಲಿಯೇ ಹೇಳಿಕೊಂಡಿದ್ದರು. ಆದರೆ ಅಂದುಕೊಂಡಿದ್ದಕ್ಕಿಂತ ಡಬಲ್ ಸಾಧನೆ ಮಾಡಿ, 20 ಲಕ್ಷ ಫಾಲೋವರ್ಸ್ ಪಡೆದು ಗಿಲ್ಲಿ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದಾರೆ. ಬಿಗ್ಬಾಸ್ ಫಿನಾಲೆ ದಿನಕ್ಕೆಲೇ ಗಿಲ್ಲಿ 1.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದರು. ಶೋ ಮುಗಿದ ಕೆಲವೇ ದಿನಗಳಲ್ಲಿ ಈ ಸಂಖ್ಯೆ ವೇಗವಾಗಿ ಏರಿಕೆಯಾಗುತ್ತಿದ್ದು, ಇದೀಗ 2 ಮಿಲಿಯನ್ ಗಡಿ ದಾಟಿದೆ.
ಬಿಗ್ಬಾಸ್ ಶೋ ಗಿಲ್ಲಿಯ ವೃತ್ತಿಜೀವನಕ್ಕೆ ಹೊಸ ದಿಕ್ಕು ನೀಡಿದ್ದು, ಅವರ ಜನಪ್ರಿಯತೆ ದಿನೇ ದಿನೇ ಹೆಚ್ಚಾಗುತ್ತಿದೆ. ಕೆಲವೇ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ನಡುವೆ ಬಿಗ್ಬಾಸ್ ಖ್ಯಾತಿಯ ನಿವೇದಿತಾ ಗೌಡಗೆ 2.1 ಮಿಲಿಯನ್ ಇನ್ಸ್ಟಾಗ್ರಾಂ ಫಾಲೋವರ್ಸ್ ಇದ್ದು, ಗಿಲ್ಲಿ ಅವರನ್ನು ಶೀಘ್ರದಲ್ಲೇ ಹಿಂದಿಕ್ಕುವ ಸಾಧ್ಯತೆ ದಟ್ಟವಾಗಿದೆ.
ಇಷ್ಟು ದೊಡ್ಡ ಮಟ್ಟದ ಜನಪ್ರಿಯತೆ ಗಿಲ್ಲಿಗೆ ಇನ್ನೂ ಸಂಪೂರ್ಣವಾಗಿ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. “ಇದು ರಿಯಾಲಿಟಿಯೇ?” ಎಂಬ ಭಾವದಲ್ಲಿ ಗಿಲ್ಲಿ ಇದ್ದು, ಈ ಅಪಾರ ಪ್ರೀತಿ ಮತ್ತು ಬೆಂಬಲವನ್ನು ಒಪ್ಪಿಕೊಳ್ಳಲು ಸಾಕಷ್ಟು ಕಷ್ಟಪಡುತ್ತಿದ್ದಾರೆ ಎನ್ನಲಾಗಿದೆ. ಬಿಗ್ಬಾಸ್ ಮೂಲಕ ಉದಯಿಸಿದ ಗಿಲ್ಲಿಯ ಯಶಸ್ಸು ಮುಂದೇನು ಹೊಸ ಎತ್ತರ ತಲುಪಲಿದೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
