Ashwaveega News 24×7 ಫೆಬ್ರವರಿ 07 -2026 – ಬೆಂಗಳೂರು : ಬಿಗ್ಬಾಸ್ ವಿನ್ನರ್ ಗಿಲ್ಲಿ ವಿರುದ್ಧ ಷಡ್ಯಂತ್ರ ನಡೆಯುತ್ತಿದೆಯೇ ಎಂಬ ಅನುಮಾನಗಳು ಇದೀಗ ತೀವ್ರವಾಗಿವೆ. ‘ಸರ್ಕಾರಿ ಶಾಲೆ H8’ ಸಿನಿಮಾ ತಂಡದಿಂದ ಗಿಲ್ಲಿ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (ಫಿಲಂ ಚೇಂಬರ್) ಅಧಿಕೃತ ದೂರು ದಾಖಲಾಗಿದೆ.
ಸಿನಿಮಾ ಪ್ರಮೋಷನ್ನಲ್ಲಿ ಗಿಲ್ಲಿ ಪಾಲ್ಗೊಂಡಿಲ್ಲ ಎಂಬ ಆರೋಪವನ್ನು ಸಿನಿಮಾ ತಂಡ ಮಾಡಿದ್ದು, ಇದೇ ವಿಚಾರವಾಗಿ ಗಿಲ್ಲಿ ವಿರುದ್ಧ ದೂರು ಸಲ್ಲಿಸಲಾಗಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಗಿಲ್ಲಿ ಅಭಿಮಾನಿಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಗಿಲ್ಲಿ ಈ ಸಿನಿಮಾ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಆದರೆ ಆ ವಿಡಿಯೋವನ್ನು ಡಿಲೀಟ್ ಮಾಡಿಸಿ, ನಂತರ ಗಿಲ್ಲಿ ವಿರುದ್ಧ ಕಂಪ್ಲೆಂಟ್ ನೀಡಲಾಗಿದೆ . ಇದೊಂದು ಉದ್ದೇಶಪೂರ್ವಕ ನೆಗೆಟಿವ್ ಮಾಡುವ ಪ್ರಯತ್ನ ಎಂದು ಅಭಿಮಾನಿಗಳು ಕಿಡಿಕಾರಿದ್ದಾರೆ.
“ಗಿಲ್ಲಿಯನ್ನು ಟಾರ್ಗೆಟ್ ಮಾಡಿ ಚೀಪ್ ಗಿಮಿಕ್ ಮಾಡಲಾಗುತ್ತಿದೆ. ಬಿಗ್ಬಾಸ್ ಗೆಲುವಿನ ಬಳಿಕ ಜನಪ್ರಿಯತೆಯನ್ನು ಸಹಿಸದೇ ಈ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ಗಿಲ್ಲಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಿಲ್ಲಿಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಿರುವ ಅಭಿಮಾನಿಗಳು, ಸಿನಿಮಾ ತಂಡದ ವಿರುದ್ಧ ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಈ ವಿಚಾರ ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ…
