Ashwaveega News 24×7 ಜನವರಿ 17 – ಬೆಂಗಳೂರು : ನಟಿ ಜಾಹ್ನವಿ ನೀಡಿದ ಹೇಳಿಕೆಗೆ ಗಿಲ್ಲಿ ಅಭಿಮಾನಿಗಳು ತೀವ್ರವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ಕಮೆಂಟ್ಗಳ ಸುರಿಮಳೆ ಹರಿದುಬಂದಿದೆ. ಜಾಹ್ನವಿ ಮಾತುಗಳನ್ನು ಪ್ರಶ್ನಿಸಿರುವ ಗಿಲ್ಲಿ ಫ್ಯಾನ್ಸ್, ತಮ್ಮ ನೆಚ್ಚಿನ ಸ್ಪರ್ಧಿಗೆ ಬೆಂಬಲ ವ್ಯಕ್ತಪಡಿಸುತ್ತಾ ವಿಭಿನ್ನ ರೀತಿಯ ಕಾಮೆಂಟ್ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.
‘ಆಂಟಿ.. ಗಿಲ್ಲಿಗೆ ವೋಟ್ ಮಾಡೋದು ಮರಿಬೇಡಿ’, ‘ಮೋ.. ಹೋಗಮ್ಮ ಸೈಡಿಗೆ’, ‘ನಿನ್ನ ಉಪದೇಶ ಯಾರಿಗೆ ಬೇಕು?’ ಎನ್ನುವಂತಹ ವ್ಯಂಗ್ಯಭರಿತ ಪ್ರತಿಕ್ರಿಯೆಗಳು ವೈರಲ್ ಆಗಿವೆ. ಇನ್ನು ‘ಡಮಾಲ್ ಡಿಮಿಲ್ ಡಕ್ಕಾ, ನಮ್ಮ ಗಿಲ್ಲಿ ಗೆಲ್ಲೋದು ಪಕ್ಕಾ’ ಎಂಬ ಘೋಷಣೆಯೂ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.

ಜಾಹ್ನವಿ ಈ ವಿಷಯವನ್ನು ಪರ್ಸನಲ್ ಆಗಿ ತೆಗೆದುಕೊಂಡಿರುವಂತೆ ಕಾಣುತ್ತಿದೆ ಎಂದು ಅಭಿಮಾನಿಗಳು ಟೀಕಿಸಿದ್ದು, ‘ನೀವು ಪರ್ಸನಲ್ ಆಗಿ ತಗೊಂಡಿದ್ದೀರ ಅಂತ ಗೊತ್ತಾಯ್ತು’ ಎಂಬ ಕಮೆಂಟ್ಗಳು ಕಾಣಿಸುತ್ತಿವೆ. ಮತ್ತೊಂದೆಡೆ, ‘ಇದು ಒಂಥರಾ ಎಲೆಕ್ಷನ್ ಇದ್ದ ಹಾಗೆ’ ಎಂದು ಹೇಳುವ ಮೂಲಕ, ಈ ಸ್ಪರ್ಧೆಯನ್ನು ಚುನಾವಣೆಗೆ ಹೋಲಿಕೆ ಮಾಡಿರುವ ಅಭಿಮಾನಿಗಳೂ ಇದ್ದಾರೆ.
‘ನಮ್ಮ ಮತ ಗಿಲ್ಲಿಗೆನೇ. ಏನೀಗ…?’, ‘ಚಿಕ್ಕವ್ವ ನಾನು ಗಿಲ್ಲಿಗೆ ವೋಟ್ ಹಾಕೋದು’ ಎಂಬ ಹೇಳಿಕೆಗಳು ಕೇಳಿ ಬಂದಿದೆ .. ಅಲ್ಲದೆ, ‘ಕೋಳಿ ಕೂಗದಿದ್ರೂ ಸೂರ್ಯ ಬೆಳಗ್ತಾನೆ’ ಎಂಬ ಗಾದೆ ಬಳಸಿ, ಗಿಲ್ಲಿಯ ಗೆಲುವು ಖಚಿತ ಎಂಬ ಸಂದೇಶವನ್ನು ಫ್ಯಾನ್ಸ್ ಹೇಳುತ್ತಿದ್ದಾರೆ …
ಒಟ್ಟಾರೆ, ಜಾಹ್ನವಿ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಗಿಲ್ಲಿ ಫ್ಯಾನ್ಸ್ ತಮ್ಮ ಬೆಂಬಲವನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಿದ್ದಾರೆ. ಈ ವಾಗ್ವಾದ ಮುಂದೇನು ತಿರುವು ಪಡೆಯಲಿದೆ ಎಂಬುದು ಕಾದು ನೋಡಬೇಕಿದೆ.
