Ashwaveega News 24×7 ಮಾರ್ಚ್ 09 – 2026 : ಬೆಂಗಳೂರು : ನಗರದ ಹೃದಯಭಾಗವಾದ ವಿಧಾನಸೌಧದ ಮುಂಭಾಗದಲ್ಲಿ ಕೆಲವು ಯುವತಿಯರ ನಡುವೆ ನಡೆದ ಗಲಾಟೆ ಭಾರಿ ಗಮನಸೆಳೆದಿದೆ. ನಡು ರಸ್ತೆಯಲ್ಲೇ ಪರಸ್ಪರ ಕೈ ಕೈ ಮಿಲಾಯಿಸಿಕೊಂಡು ಎಳೆದಾಟ ನಡೆಸಿದ ಘಟನೆ ಸಂಜೆ ಸುಮಾರು 6 ಗಂಟೆ ಸುಮಾರಿಗೆ ನಡೆದಿದೆ .
ಒಂದು ವಿಡಿಯೋ ವಿಚಾರವನ್ನು ಕೇಂದ್ರವಾಗಿ ಮಾಡಿಕೊಂಡು ಯುವತಿಯರ ನಡುವೆ ಮಾತಿನ ಚಕಮಕಿ ಆರಂಭವಾಗಿದೆ. ಬಳಿಕ ಅದು ತೀವ್ರವಾಗಿ ವಾಗ್ವಾದಕ್ಕೆ ತಿರುಗಿ, ಪರಿಸ್ಥಿತಿ ಹೈಡ್ರಾಮಾವಾಗಿ ಮಾರ್ಪಟ್ಟಿತು. ಕೆಲವರು ಒಬ್ಬರಿಗೊಬ್ಬರು ಎಳೆಯಾಟ ನಡೆಸಿ ರಸ್ತೆ ಮಧ್ಯೆಯೇ ಗಲಾಟೆ ನಡೆಸಿದರು .
ಘಟನೆಯ ವೇಳೆ ಯುವತಿಯರು ಹಿಂದಿ ಭಾಷೆಯಲ್ಲಿ ಪರಸ್ಪರ ಬೈದಾಡಿಕೊಂಡಿರುವುದಾಗಿ ತಿಳಿದುಬಂದಿದೆ . ಗಲಾಟೆ ಹೆಚ್ಚಾದ ಕಾರಣ ಅಲ್ಲಿದ್ದ ಸಾರ್ವಜನಿಕರು ಮಧ್ಯಪ್ರವೇಶಿಸಿ ಅವರನ್ನು ಸಮಾಧಾನಪಡಿಸಲು ಹರಸಾಹಸ ಪಟ್ಟರು .
ಸ್ವಲ್ಪ ಹೊತ್ತಿನ ಬಳಿಕ ಸ್ಥಳೀಯರ ಹಸ್ತಕ್ಷೇಪದಿಂದ ಪರಿಸ್ಥಿತಿ ಶಾಂತಗೊಂಡಿತು. ಈ ಘಟನೆ ಅಲ್ಲಿದ್ದ ಕೆಲವರ ಮೊಬೈಲ್ನಲ್ಲಿ ದಾಖಲಾಗಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ನಗರದ ಅತ್ಯಂತ ಭದ್ರತಾ ವಲಯವೆಂದೇ ಪರಿಗಣಿಸಲ್ಪಡುವ ವಿಧಾನಸೌಧದ ಮುಂಭಾಗದಲ್ಲೇ ಇಂತಹ ಘಟನೆ ನಡೆದಿರುವುದು ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ.
