Ashwaveega News 24×7 ಮಾರ್ಚ್ 10 – 2026 : ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮುಂದುವರಿದಿರುವ ನಡುವೆ ಅಮೆರಿಕದ ಅಧ್ಯಕ್ಷ Donald Trump ಮಹತ್ವದ ಹೇಳಿಕೆ ನೀಡಿದ್ದಾರೆ . Iran ವಿರುದ್ಧ ನಡೆಯುತ್ತಿರುವ ಸಮರದ ಬಗ್ಗೆ ಮಾತನಾಡಿದ ಅವರು, ಯುದ್ಧ ಶೀಘ್ರದಲ್ಲೇ ಕೊನೆಗೊಳ್ಳುವ ಸಾಧ್ಯತೆ ಇದೆ .
ಇರಾನ್ನ ನೌಕಾಪಡೆ , ಡ್ರೋನ್ ಮತ್ತು ಕ್ಷಿಪಣಿ ಸಾಮರ್ಥ್ಯಕ್ಕೆ ದೊಡ್ಡ ಪೆಟ್ಟು ಬಿದ್ದಿದೆ . ಇರಾನ್ನ ನೌಕಾಪಡೆಯು ಭಾರೀ ನಷ್ಟ ಅನುಭವಿಸಿದ್ದು , ಅಮೆರಿಕ ತನ್ನ ಸೈನಿಕ ಉದ್ದೇಶಗಳನ್ನು ವೇಗವಾಗಿ ಸಾಧಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಈಗಾಗಲೇ ಹಲವು ರೀತಿಯಲ್ಲಿ ನಾವು ಗೆದ್ದಿದ್ದೇವೆ ಎಂದು ಟ್ರಂಪ್ ಹೇಳಿದ್ದಾರೆ. ಈ ಬೆಳವಣಿಗೆಗಳಿಂದ ಯುದ್ಧ ನಿರ್ಣಾಯಕ ಹಂತದತ್ತ ಸಾಗುತ್ತಿದೆ ಎಂಬ ಸೂಚನೆ ದೊರೆಯುತ್ತಿದೆ . ಇದಲ್ಲದೆ, ಇರಾನ್ಗೆ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಲು ಅವಕಾಶ ನೀಡುವುದಿಲ್ಲ ಎಂಬುದನ್ನೂ ಅಮೆರಿಕ ಸ್ಪಷ್ಟಪಡಿಸಿದೆ . ಯುದ್ಧವನ್ನು ಯಾವ ಹಂತದಲ್ಲಿ ಕೊನೆಗಾಣಿಸಬೇಕು ಎಂಬ ನಿರ್ಧಾರ ನಮ್ಮ ಕೈಯಲ್ಲಿದೆ ಎಂದು ಟ್ರಂಪ್ ಘೋಷಿಸಿದ್ದಾರೆ.
ಇದರ ನಡುವೆ China ಮತ್ತು Russia ನೀಡಿರುವ ಎಚ್ಚರಿಕೆಗಳ ನಂತರ ಅಮೆರಿಕ ತನ್ನ ನಿಲುವಿನಲ್ಲಿ ಸ್ವಲ್ಪ ತಣ್ಣಗಾಗಿದೆ ಎಂಬ ಚರ್ಚೆಯೂ ಜಾಗತಿಕ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ .
