Ashwaveega News 24×7 ಮಾರ್ಚ್ 18– 2026 : ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧ ಪರಿಸ್ಥಿತಿಯ ಪರಿಣಾಮವಾಗಿ ಬಂಗಾರ ಮತ್ತು ಬೆಳ್ಳಿ ಬೆಲೆಯಲ್ಲಿ ಕುಸಿತ ಕಾಣಿಸುತ್ತಿದೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಏರಿಕೆಯಾಗುತ್ತಿದ್ದ ಚಿನ್ನದ ದರ ಇದೀಗ ಇಳಿಕೆಯಾಗುತ್ತಿರುವುದು ಖರೀದಿದಾರರಿಗೆ ಸಂತಸದ ಸುದ್ದಿ ಆಗಿದೆ.
ಇದೀಗ 10 ಗ್ರಾಂ ಬಂಗಾರದ ಬೆಲೆ ಸುಮಾರು ₹1,61,000 ಮಟ್ಟಕ್ಕೆ ಇಳಿಕೆಯಾಗಿದ್ದು, ದಿನದಿಂದ ದಿನಕ್ಕೆ ದರ ಕಡಿಮೆಯಾಗುತ್ತಿರುವ ಟ್ರೆಂಡ್ ಕಂಡುಬರುತ್ತಿದೆ. ಇದೇ ರೀತಿಯಾಗಿ ಬೆಳ್ಳಿ ದರದಲ್ಲೂ ಇಳಿಕೆ ಕಂಡುಬಂದಿದ್ದು, ಒಂದು ಕೆ.ಜಿ. ಬೆಳ್ಳಿಯ ಬೆಲೆ ಸುಮಾರು ₹ 2,66,000ಕ್ಕೆ ತಲುಪಿದೆ .
ಇತ್ತೀಚಿನ ದಿನಗಳಲ್ಲಿ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದ್ದ ಬಂಗಾರ ಮತ್ತು ಬೆಳ್ಳಿ ದರಗಳು, ಯುದ್ಧದ ಪರಿಣಾಮದಿಂದ ಜಾಗತಿಕ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿದ್ದು, ಹೂಡಿಕೆದಾರರು ಡಾಲರ್ ಕಡೆಗೆ ತಿರುಗುತ್ತಿರುವುದು ಮುಖ್ಯ ಕಾರಣವಾಗಿದೆ . ಡಾಲರ್ ಮೇಲೆ ಹೂಡಿಕೆ ಮಾಡಿದವರಿಗೆ ಲಾಭವಾಗುತ್ತಿದ್ದರೂ, ಷೇರುಪೇಟೆಯಲ್ಲಿ ತಲ್ಲಣ ಮುಂದುವರಿದಿದೆ.
ತಜ್ಞರ ಪ್ರಕಾರ, ಮುಂದಿನ ದಿನಗಳಲ್ಲಿ ಜಾಗತಿಕ ರಾಜಕೀಯ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿಯೇ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಮತ್ತಷ್ಟು ಬದಲಾವಣೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ . ಖರೀದಿದಾರರು ಈ ಸಮಯವನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ನಿರ್ಧಾರ ಕೈಗೊಳ್ಳುವುದು ಒಳಿತು.
