Ashwaveega News 24×7 ಫೆಬ್ರವರಿ 09 -2026 – ಬೆಂಗಳೂರು : ಚಿನ್ನದ ಬೆಲೆಯಲ್ಲಿ ಇಂದು ದಾಖಲೆ ಮಟ್ಟದ ಏರಿಕೆ ಕಂಡುಬಂದಿದ್ದು, ಒಂದೇ ದಿನ ಬರೋಬ್ಬರಿ ₹5,000 ಜಂಪ್ ಆಗಿದೆ. ಕಳೆದ ನಾಲ್ಕು ದಿನಗಳಿಂದ ಸ್ಥಿರವಾಗಿದ್ದ ಬಂಗಾರದ ಬೆಲೆ, ಏಕಾಏಕಿ ಆಕಾಶಕ್ಕೇರಿದೆ.
ಈ ಹಿಂದೆ ₹1.56 ಲಕ್ಷ ಇದ್ದ ಚಿನ್ನದ ಬೆಲೆ, ಇಂದು ₹1.61 ಲಕ್ಷಕ್ಕೆ ಏರಿಕೆಯಾಗಿದೆ. ಹತ್ತು ಗ್ರಾಂ ಶುದ್ಧ ಚಿನ್ನದ ಸದ್ಯದ ಬೆಲೆ ₹1,61,142 ರೂಪಾಯಿಗೆ ತಲುಪಿದೆ. ಚಿನ್ನ ಮಾತ್ರವಲ್ಲ, ಬೆಳ್ಳಿ ಬೆಲೆಯಲ್ಲೂ ಭಾರೀ ಜಿಗಿತ ಕಂಡುಬಂದಿದೆ. ಇಂದು ಒಂದೇ ದಿನದಲ್ಲಿ ಬೆಳ್ಳಿ ಬೆಲೆ ಸುಮಾರು ₹16,000 ಹೆಚ್ಚಳವಾಗಿದ್ದು, ₹2.56 ಲಕ್ಷದಿಂದ ₹2.70 ಲಕ್ಷ ರೂಪಾಯಿಗೆ ಏರಿಕೆಯಾಗಿದೆ.
ಮಾರುಕಟ್ಟೆ ವಲಯದ ಮಾಹಿತಿ ಪ್ರಕಾರ, ಇಂದು ಸಂಜೆ ಹೊತ್ತಿಗೆ ಬೆಳ್ಳಿ ಬೆಲೆಯಲ್ಲಿ ಇನ್ನೂ ₹10,000ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ
ಅಂತರರಾಷ್ಟ್ರೀಯ ಮಾರುಕಟ್ಟೆ ಬೆಳವಣಿಗೆ, ಡಾಲರ್ ಮೌಲ್ಯ ಹಾಗೂ ಹೂಡಿಕೆದಾರರ ಬೇಡಿಕೆ ಏರಿಕೆಯೇ ಈ ದಿಢೀರ್ ಬೆಲೆ ಜಿಗಿತಕ್ಕೆ ಕಾರಣ ಎಂದು ಅಂದಾಜಿಸಲಾಗಿದೆ. ಬಂಗಾರ–ಬೆಳ್ಳಿ ದರ ಏರಿಕೆಯಿಂದ ಗ್ರಾಹಕರು ಹಾಗೂ ವ್ಯಾಪಾರಿಗಳು ಅಚ್ಚರಿಗೊಂಡಿದ್ದಾರೆ.
