Ashwaveega News 24×7 ಏಪ್ರಿಲ್ 4– 2026 : ಬೆಂಗಳೂರು : ವಿಶ್ವದತ್ತ ಯುದ್ಧದ ಹಿನ್ನೆಲೆಯಲ್ಲಿ ಚಿನ್ನ-ಬೆಳ್ಳಿ ಬೆಲೆಗಳಲ್ಲಿ ಉಲ್ಟಾಪಲ್ಟಾ ಪರಿಸ್ಥಿತಿ ಕಂಡುಬಂದಿದ್ದು, ಹೂಡಿಕೆದಾರರಲ್ಲಿ ಗೊಂದಲ ಹೆಚ್ಚಾಗಿದೆ .
ಇತ್ತೀಚೆಗೆ ಚಿನ್ನದ ಬೆಲೆ ಏರಿಕೆ ಗಮನ ಸೆಳೆದಿದ್ದು, 10 ಗ್ರಾಂ ಶುದ್ಧ ಚಿನ್ನದ ಬೆಲೆ ₹ 1.53 ಲಕ್ಷಕ್ಕೆ ಏರಿಕೆ ಕಂಡಿದೆ. ಒಂದೇ ದಿನದಲ್ಲಿ ಸುಮಾರು ಒಂದೂವರೆ ಸಾವಿರ ರೂ. ಜಂಪ್ ದಾಖಲಾಗಿದ್ದು, ಹೂಡಿಕೆದಾರರಲ್ಲಿ ಆತಂಕದ ಪರಿಸ್ಥಿತಿ ಉಂಟಾಗಿದೆ .
ಇದಕ್ಕೂ ವಿರುದ್ಧವಾಗಿ, ಬೆಳ್ಳಿ ಬೆಲೆ ಭಾರೀ ಇಳಿಕೆ ಕಂಡು ಒಂದು ಕೆಜಿ ಬೆಳ್ಳಿ ₹2.38 ಲಕ್ಷಕ್ಕೆ ಕುಸಿತವಾಗಿದೆ. ಒಂದೇ ದಿನದಲ್ಲಿ ₹1 ಲಕ್ಷಕ್ಕೂ ಹೆಚ್ಚು ಕುಸಿತ ದಾಖಲಾಗಿದ್ದು, ಹೂಡಿಕೆದಾರರು ಬೆಲೆ ಏರಿಕೆ / ಇಳಿಕೆ ನಡುವೆ ತೀರ್ಮಾನ ಮಾಡಲು ಯೋಜನೆ ಮಾಡುತ್ತಿದ್ದಾರೆ .
ಚಿನ್ನ, ಬೆಳ್ಳಿ ಬೆಲೆ ಏರಿಳಿತದಿಂದ ಹೂಡಿಕೆದಾರರು ‘ಏನ್ ಮಾಡ್ಬೇಕು ?’ ಎಂಬ ಟೆನ್ಶನ್ನಲ್ಲಿದ್ದಾರೆ .. ಸೂಚಿಸುತ್ತಿದ್ದಾರೆ, ಈ ದಶಕದ ವಿಲಕ್ಷಣ ಪರಿಸ್ಥಿತಿಯಲ್ಲಿ, ಹೂಡಿಕೆ ಮೊತ್ತವನ್ನು ವಿಭಜಿಸಿ ಬಂಗಾರ – ಬೆಳ್ಳಿ ಅಥವಾ ಇತರ ಆಸ್ತಿ ಮಾರ್ಗಗಳಲ್ಲಿ ಹೂಡಿಕೆ ಮಾಡುವ ತಂತ್ರವೇ ಹೆಚ್ಚು ಸುರಕ್ಷಿತ ಎಂದು ಹೇಳಿದ್ದಾರೆ …
