Ashwaveega News 24×7 ಮಾರ್ಚ್ 21 – 2026 : ಬೆಂಗಳೂರು: ರಂಜಾನ್ ಹಬ್ಬದ ಮುನ್ನ ಚಿನ್ನ ಖರೀದಿ ಮಾಡಲು ಯೋಚಿಸುತ್ತಿರುವವರಿಗೆ ಸಣ್ಣ ಮಟ್ಟಿನ ಸಂತಸದ ಸುದ್ದಿ ಸಿಕ್ಕಿದೆ. ನಿನ್ನೆ ಭಾರೀ ಏರಿಕೆ ಕಂಡಿದ್ದ ಚಿನ್ನದ ದರ ಇಂದು ಏಕಾಏಕಿ ಇಳಿಕೆ ಕಂಡಿದೆ.
ನಿನ್ನೆ 1 ಲಕ್ಷ 55 ಸಾವಿರ ರೂಪಾಯಿಗೆ ತಲುಪಿದ್ದ ಚಿನ್ನದ ಬೆಲೆ, ಇಂದು ದಿಢೀರ್ 5 ಸಾವಿರ ರೂಪಾಯಿ ಇಳಿಕೆ ಕಂಡು 1 ಲಕ್ಷ 50 ಸಾವಿರ ರೂಪಾಯಿಗೆ ಇಳಿದಿದೆ. ದಿನೇ ದಿನೇ ಚಿನ್ನದ ದರ ಹಾವು – ಏಣಿ ಆಟದಂತೆ ಏರಿಳಿತ ಕಾಣಿಸುತ್ತಿದ್ದು, ಖರೀದಿದಾರರಲ್ಲಿ ಗೊಂದಲ ಮೂಡಿಸಿದೆ.
ಇನ್ನೊಂದೆಡೆ, ಬೆಳ್ಳಿ ದರದಲ್ಲೂ ಸ್ವಲ್ಪ ಇಳಿಕೆ ಕಂಡುಬಂದಿದೆ. ನಿನ್ನೆ 2,36,000 ರೂಪಾಯಿ ಇದ್ದ ಬೆಳ್ಳಿ ಬೆಲೆ, ಇಂದು 2,33,000 ರೂಪಾಯಿಗೆ ಇಳಿಕೆಯಾಗಿದೆ.
ಪದೇ ಪದೇ ದರ ಬದಲಾವಣೆಯಾಗುತ್ತಿರುವ ಹಿನ್ನೆಲೆ, ಆಭರಣ ಖರೀದಿಸಲು ಮುಂದಾಗಿರುವ ಜನರು ಗೊಂದಲಕ್ಕೆ ಒಳಗಾಗಿದ್ದಾರೆ. ಆದಾಗ್ಯೂ, ರಂಜಾನ್ ಹಬ್ಬದ ಸಡಗರದಲ್ಲಿ ಚಿನ್ನ ಖರೀದಿ ಮಾಡುವವರಿಗೆ ಇದು ಒಳ್ಳೆಯ ಅವಕಾಶವಾಗಬಹುದು ಎಂದು ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಮುಂದಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ಮತ್ತೆ ಏರಿಕೆ ಕಾಣುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ.
