Ashwaveega News 24×7 ಫೆಬ್ರವರಿ 07 -2026 – ಬೆಂಗಳೂರು : ನಿರಂತರ ಏರಿಕೆ–ಇಳಿಕೆಯ ಬಳಿಕ ಚಿನ್ನದ ಬೆಲೆ ಸದ್ಯ ಸೈಲೆಂಟ್ ಆಗಿದ್ದು, ಇಂದಿನ ಗೋಲ್ಡ್ ರೇಟ್ನಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. 10 ಗ್ರಾಂ ಚಿನ್ನದ ಬೆಲೆ 1 ಲಕ್ಷ 57 ಸಾವಿರ ರೂಪಾಯಿಗಳ ಮಟ್ಟದಲ್ಲೇ ಸ್ಥಿರವಾಗಿದೆ.
ಇದಕ್ಕೆ ವಿರುದ್ಧವಾಗಿ ಬೆಳ್ಳಿ ಬೆಲೆಯಲ್ಲಿ ಇಳಿಕೆ ದಾಖಲಾಗಿದೆ. ಕಿಲೋಗ್ರಾಂ ಬೆಳ್ಳಿ ಬೆಲೆ ಇಂದು 2 ಲಕ್ಷ 50 ಸಾವಿರ ರೂಪಾಯಿಗೆ ಇಳಿದಿದ್ದು, ನಿನ್ನೆ 2.60 ಲಕ್ಷ ರೂಪಾಯಿಗಳಿದ್ದ ಬೆಳ್ಳಿ ದರದಲ್ಲಿ 10 ಸಾವಿರ ರೂಪಾಯಿ ಕುಸಿತ ಕಂಡುಬಂದಿದೆ.
ಕಳೆದ ಒಂದು ವಾರದಿಂದ ಚಿನ್ನದ ಬೆಲೆ ಏರಿಕೆ–ಇಳಿಕೆಯ ಹಾವು-ಏಣಿ ಆಟ ನಡೆಸುತ್ತಿದ್ದು, ದರಗಳಲ್ಲಿ ಸ್ಥಿರತೆ ಕಾಣದ ಕಾರಣ ಗ್ರಾಹಕರಲ್ಲಿ ಗೊಂದಲ ಉಂಟಾಗಿದೆ. ಇದರ ಪರಿಣಾಮವಾಗಿ ಚಿನ್ನ ಮತ್ತು ಬೆಳ್ಳಿ ಖರೀದಿಗೆ ಜನರು ಸದ್ಯ ಹಿಂದೇಟು ಹಾಕುತ್ತಿರುವ ಸ್ಥಿತಿ ನಿರ್ಮಾಣವಾಗಿದೆ.
ಮಾರುಕಟ್ಟೆ ವಲಯದಲ್ಲಿ ಮುಂದಿನ ದಿನಗಳಲ್ಲಿ ದರಗಳಲ್ಲಿ ಸ್ಪಷ್ಟತೆ ಬರಬಹುದು ಎಂಬ ನಿರೀಕ್ಷೆ ಇದ್ದರೂ, ಸದ್ಯದ ಮಟ್ಟಿಗೆ ಗ್ರಾಹಕರು ಬೆಲೆ ಚಲನವಲನವನ್ನು ಗಮನಿಸುತ್ತಾ ಕಾಯುವ ತಂತ್ರ ಅನುಸರಿಸುತ್ತಿದ್ದಾರೆ.
