Ashwaveega News 24×7 ಫೆಬ್ರವರಿ 05 -2026 – ಎರಡು ದಿನಗಳ ಸತತ ಏರಿಕೆಯ ನಂತರ, ಚಿನ್ನ–ಬೆಳ್ಳಿ ಮಾರುಕಟ್ಟೆ ಮತ್ತೆ ಭಾರೀ ಕುಸಿತ ಕಂಡಿದೆ. ಇಂದಿನ ಮಾರ್ಕೆಟ್ ಓಪನ್ ಆಗ್ತಿದ್ದಂತೆ ನೆಗೆಟಿವ್ ಟ್ರೆಂಡ್ ಶುರುವಾಗಿದೆ.
ಅತಿದೊಡ್ಡ ಶಾಕ್ ಅಂದ್ರೆ ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ 25 ಸಾವಿರ ರೂಪಾಯಿ ಇಳಿಕೆ ! ಕೆಜಿ ಸಿಲ್ವರ್ ಬೆಲೆ ಈಗ 2 ಲಕ್ಷದ 55 ಸಾವಿರ ರೂಪಾಯಿಗೆ ತಲುಪಿದೆ.
ಮಾರ್ಕೆಟ್ ಆರಂಭದಿಂದಲೇ ಬೆಳ್ಳಿ ಬೆಲೆಯಲ್ಲಿ ಕ್ಷಣಕ್ಷಣಕ್ಕೂ ಏರಿಳಿತ ಕಂಡುಬರುತ್ತಿದ್ದು,
ಹೂಡಿಕೆದಾರರು, ವ್ಯಾಪಾರಿಗಳು ಗೊಂದಲದಲ್ಲಿದ್ದಾರೆ. ಬೆಳ್ಳಿಯಲ್ಲಿ ದಾಖಲೆ ಮಟ್ಟದ ಕುಸಿತ ಕಂಡಿದ್ದರೆ, ಚಿನ್ನದ ಬೆಲೆಯಲ್ಲೂ ಅಲ್ಪ ಪ್ರಮಾಣದ ಇಳಿಕೆ ದಾಖಲಾಗಿದೆ.10 ಗ್ರಾಂ ಚಿನ್ನದ ದರದಲ್ಲಿ ಸುಮಾರು 1 ಸಾವಿರ ರೂಪಾಯಿ ಡೌನ್ ಆಗಿದೆ.
ಇದೀಗ 10 ಗ್ರಾಂ ಬಂಗಾರದ ಬೆಲೆ ಸುಮಾರು 1 ಲಕ್ಷದ 57 ಸಾವಿರ ರೂಪಾಯಿ ಮಟ್ಟದಲ್ಲಿ ಟ್ರೇಡ್ ಆಗುತ್ತಿದೆ. ಮಾರ್ಕೆಟ್ ಕ್ಲೋಸಿಂಗ್ ವೇಳೆಗೆ ಇನ್ನಷ್ಟು ಬೆಲೆ ಇಳಿಕೆ ಆಗುವ ಸಾಧ್ಯತೆ ಇದೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಒಟ್ಟಿನಲ್ಲಿ, ಗೋಲ್ಡ್, ಸಿಲ್ವರ್ ರೇಟ್ ಗೆಸ್ ಮಾಡೋದೇ ಈಗ ಸವಾಲು ಅಂತನೇ ಹೇಳಬಹುದು !
ಖರೀದಿದಾರರು, ಹೂಡಿಕೆದಾರರು ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳುವಂತೆ ಸಲಹೆ ನೀಡಲಾಗ್ತಿದೆ.
