Ashwaveega News 24×7 ಜನವರಿ 24 – Gold, Silver Price Hike : ಮಧ್ಯಮ ವರ್ಗದ ಜನರಿಗೆ ಚಿನ್ನ–ಬೆಳ್ಳಿ ದಿನದಿಂದ ದಿನಕ್ಕೆ ಇನ್ನಷ್ಟು ದೂರವಾಗುತ್ತಿದೆ. ಗುರುವಾರ ಕೊಂಚ ಇಳಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ದರ, ನಿನ್ನೆ ಏಕಾಏಕಿ ಗಗನಕ್ಕೇರಿದೆ. ನಿನ್ನೆ ಒಂದೇ ದಿನದಲ್ಲಿ 10 ಗ್ರಾಂ ಚಿನ್ನದ ಬೆಲೆ 2,600 ರೂಪಾಯಿ ಜಿಗಿತ ಕಂಡಿದ್ದು,ಇದೀಗ 10 ಗ್ರಾಂ ಚಿನ್ನದ ದರ 1 ಲಕ್ಷ 58 ಸಾವಿರ ರೂಪಾಯಿಗೆ ತಲುಪಿದೆ. ಈ ಏರಿಕೆ ಮಧ್ಯಮ ಹಾಗೂ ಸಾಮಾನ್ಯ ವರ್ಗದ ಜನರಿಗೆ ಭಾರೀ ಶಾಕ್ ನೀಡಿದೆ.
ಇನ್ನೊಂದೆಡೆ ಬೆಳ್ಳಿಯ ಬೆಲೆ ಕೂಡ ಕೈಗೆ ಸಿಗದ ಮಟ್ಟಕ್ಕೆ ಜಂಪ್ ಆಗುತ್ತಿದೆ. ಪ್ರತಿ ಕಿಲೋಗ್ರಾಂ ಬೆಳ್ಳಿ ಬೆಲೆ 3 ಲಕ್ಷ 40 ಸಾವಿರ ರೂಪಾಯಿ ದಾಟಿದ್ದು, ನಿನ್ನೆ ಒಂದೇ ದಿನದಲ್ಲಿ 15 ಸಾವಿರ ರೂಪಾಯಿ ಏರಿಕೆಯಾಗಿದೆ.
ಹಬ್ಬ–ಮದುವೆ ಸೀಸನ್ ಸಮೀಪಿಸುತ್ತಿರುವ ಸಂದರ್ಭದಲ್ಲೇ ಚಿನ್ನ–ಬೆಳ್ಳಿ ದರದ ಈ ಅತಿಯಾದ ಏರಿಕೆ ಜನರ ಜೇಬಿಗೆ ಭಾರವಾಗುತ್ತಿದೆ. ಮುಂದಿನ ದಿನಗಳಲ್ಲಿ ದರ ಇಳಿಕೆ ಆಗುತ್ತಾ, ಅಥವಾ ಮತ್ತಷ್ಟು ಏರಿಕೆ ಮುಂದುವರಿಯುತ್ತಾ ಎನ್ನುವುದು ಕಾದು ನೋಡಬೇಕಿದೆ.
