Ashwaveega News 24×7 ಮಾರ್ಚ್ 10 – 2026 : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ಗೋಲ್ಡ್ ಮತ್ತು ಸಿಲ್ವರ್ ಬೆಲೆಯಲ್ಲಿ ಏರಿಳಿತ ಕಂಡುಬರುತ್ತಿದೆ. ಇದರ ನಡುವೆ ಬಂಗಾರ ಮತ್ತು ಬೆಳ್ಳಿ ಖರೀದಿಗಾರರಿಗೆ ಸ್ವಲ್ಪ ಮಟ್ಟಿನ ಗುಡ್ನ್ಯೂಸ್ ಸಿಕ್ಕಿದೆ.
ಪ್ರಸ್ತುತ ಬಂಗಾರದ ದರದಲ್ಲಿ ಯಥಾಸ್ಥಿತಿ ಮುಂದುವರಿದಿದ್ದು, 10 ಗ್ರಾಂ ಗೋಲ್ಡ್ ದರ ಸುಮಾರು 1 ಲಕ್ಷ 64 ಸಾವಿರ ರೂಪಾಯಿ ಮಟ್ಟದಲ್ಲಿ ಇದೆ. ಕೊಲ್ಲಿ ರಾಷ್ಟ್ರಗಳ ಕದನದ ನಡುವೆಯೇ ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ .
ಮತ್ತೊಂದೆಡೆ ಬೆಳ್ಳಿ ಬೆಲೆಯಲ್ಲೂ ನಿರಂತರವಾಗಿ ಇಳಿಕೆ ದಾಖಲಾಗಿದೆ. ಪ್ರಸ್ತುತ ಒಂದು ಕೆಜಿ ಬೆಳ್ಳಿಯ ದರ ಸುಮಾರು 2 ಲಕ್ಷ 72 ಸಾವಿರ ರೂಪಾಯಿ ಮಟ್ಟದಲ್ಲಿದೆ.
ಜಾಗತಿಕ ಅನಿಶ್ಚಿತತೆಯ ಹಿನ್ನೆಲೆ ಕೆಲ ಹೂಡಿಕೆದಾರರು ಗೋಲ್ಡ್ ಮತ್ತು ಸಿಲ್ವರ್ ಬಿಟ್ಟು ಡಾಲರ್ ಮೇಲೆ ಹೂಡಿಕೆ ಮಾಡುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಗೊಂದಲ ಹೆಚ್ಚಾಗಿದೆ. ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಆಗಾಗ ಏರಿಳಿತ ಕಂಡುಬರುತ್ತಿರುವುದರಿಂದ ಹೂಡಿಕೆದಾರರು ಹಾಗೂ ಗ್ರಾಹಕರು ಕ್ಷಣಕ್ಷಣಕ್ಕೂ ಟೆನ್ಶನ್ ಅನುಭವಿಸುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಗೋಲ್ಡ್ ಮತ್ತು ಸಿಲ್ವರ್ ಬೆಲೆ ಮತ್ತೆ ಏರಿಕೆಯಾಗುತ್ತದೆಯೋ ಅಥವಾ ಇನ್ನೂ ಇಳಿಕೆಯಾಗುತ್ತದೆಯೋ ಎಂಬುದನ್ನು ಕಾದು ನೋಡಬೇಕಾಗಿದೆ.
